ಸ್ಥಳೀಯ ಸುದ್ದಿ
ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ -ಇಬ್ಬರ ಬಂಧನ
ಬೆಂಗಳೂರು
ರಾಜ್ಯದ ತುಂಬೆಲ್ಲಾ ನಾವು ಎಸಿಬಿ ಅಧಿಕಾರಿಗಳು ಎಂದು ಸುಳ್ಳು ಹೇಳುತ್ತಾ, ಮೋಸ ಮಾಡಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ವಂಚನೆ ಮಾಡುತ್ತಿದ್ದ ಖದೀಮರ ಬಂಧನವಾಗಿದೆ.
ಬೆಳಗಾವಿ , ಹಾಸನ ಹಾಗೂ ಬಾಗಲಕೋಟೆ ಜಿಲ್ಲೆಯ ಹಿರಿಯ ಎಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಳಗಾವಿ ಹಾಗೂ ಹಾಸನ ಜಿಲ್ಲೆಯ ಇಬ್ಬರು ಆರೋಪಗಳನ್ನು ಬಂಧನ ಮಾಡಲಾಗಿದೆ.
ಮುರಿಗೆಪ್ಪಾ ಕುಂಬಾರ (56) ಹಾಗೂ ರಜನೀಕಾಂತ್ (46) ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲ ಆರೋಪಿ 40 ಪ್ರಕರಣಗಳಲ್ಲಿ ವಂಚಿಸಿದ್ದಾರೆ, 2 ನೇ ಆರೋಪಿ 6 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.