ಹೂವಿನಹಡಗಲಿ ಉಪಕಾರಾಗೃಹದಲ್ಲಿ ಗ್ರಂಥಾಲಯ ಉದ್ಘಾಟನೆ
ವಿಜಯನಗರ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಉಪಕಾರಾಗೃಹದಲ್ಲಿ ನೂತನ ಗ್ರಂಥಾಲಯವನ್ನು ಉದ್ಘಾಟನೆ ಮಾಡಲಾಯಿತು.
ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಆದ
ವಿರೇಶಕುಮಾರ ಸಿ.ಕೆ ಅವರು ಗ್ರಂಥಾಲಯ ಉದ್ಘಾಟಿಸಿದ್ರು.
ಗ್ರಂಥಾಲಯವನ್ನು ಉಪಕಾರಾಗೃಹದಲ್ಲಿ ತೆರೆಯಬೇಕೆಂಬುದು ನ್ಯಾಯಾಧೀಶರ ಕನಸಾಗಿತ್ತು. ಈ ಕನಸನ್ನು ಜನೇವರಿ 26 ರಂದು ಗಣರಾಜ್ಯೋತ್ಸವ ದಿನದಂದು ನನಸು ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಗೌರವಾನ್ವಿತ ನ್ಯಾಯಾಧೀಶರು,
ಗ್ರಂಥಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಆಧ್ಯಾತ್ಮಿಕ ಲೋಕಕ್ಕೆ ಸಂಬಂಧಿಸದಂತೆ, ವ್ಯಕ್ತಿತ್ವ ವಿಕಸನಕ್ಕೆ ಹಲವಾರು ಪುಸ್ತಕಗಳು ಲಭ್ಯವಿದ್ದು, ವಿದ್ಯಾವಂತರು ಇವುಗಳನ್ನು ಓದಿ, ಇಲ್ಲಿರುವ ಉಳಿದ ಅವಿದ್ಯಾವಂತರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಗ್ರಂಥಾಲಯದ ಸದುಪಯೋಗ ತೆಗೆದುಕೊಂಡು, ಮನಪರಿವರ್ತನೆ ಮಾಡಿಕೊಂಡು ಜೀವನ ಸುಧಾರಿಸುವ ನಿಟ್ಟಿನಲ್ಲಿ ಕಾರಾಗೃಹದಲ್ಲಿ ಬಂಧಿಗಳು ಮುಂದಾಗಬೇಕೆಂದು ನ್ಯಾಯಾಧೀಶರು ಹೇಳಿದ್ರು.
ತಾಲೂಕು ಉಪಕಾರಾಗೃಹದ ಅಧೀಕ್ಷಕರು ಆಗಿರುವ ಶರಣಬಸವ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗ್ರಂಥಾಲಯ ಒಂದು ಶಸ್ತ್ರಸಜ್ಜಿತ ಕೊಠಡಿ ಇದ್ದ ಹಾಗೆ. ಇಲ್ಲಿರುವ ಗ್ರಂಥಗಳನ್ನು ಶಸ್ತ್ರಗಳು ಎಂದು ತಿಳಿದುಕೊಂಡು ಓದುವ ಮೂಲಕ, ಶಸ್ತ್ರಾಸ್ತ್ರ ತರಬೇತಿ ಹೊಂದಿದ ಹಾಗೆ ಪುಸ್ತಕಗಳಲ್ಲಿರುವ ಜ್ಞಾನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಅಜ್ಜಯ್ಯಾ, ಕಾನೂನು ಸಲಹೆಗಾರರಾದ ಶ್ರೀಮತಿ ಸುಜಾತ, ಶಾಖಾ ಗ್ರಂಥಾಲಯದ ಅಧಿಕಾರಿಗಳಾದ ಮಂಜುನಾಥ ಭೋವಿ, ಹಿರಿಯ ನ್ಯಾಯವಾದಿಗಳಾದ ಹಣಮಂತ, ಕೃಷ್ಣಾನಾಯಕ,ಪ್ಯಾನಲ್ ಅಡ್ವೋಕೇಟ ಹನುಮಂತ ಸೇರಿದಂತೆ ಕಾರಾಗೃಹದ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.
ಶಂಕರರಾವ ಮತ್ತು ರಾಜಪೀರ ನಿರೂಪಣೆ ಮಾಡಿದ್ರು.
ನಾಗೇಂದ್ರ ಹೋಳಿ ವಂದಿಸಿದ್ರು.