ಹುತಾತ್ಮರ ದಿನಾಚರಣೆ ಅಂಗವಾಗಿ ಪಂಜಿನ ಮೆರವಣಿಗೆ
ಹುತಾತ್ಮರ ದಿನದ ಅಂಗವಾಗಿ ಧಾರವಾಡದ ವಾರ್ಡ ನಂಬರ್ 3 ರ ಮಹಾಂತ ಬಸವೇಶ್ವರ ನಗರದಲ್ಲಿ ವೀರಮರಣ ಅಪ್ಪಿದ ಭಗತಸಿಂಗ್, ರಾಜಗುರು ಹಾಗೂ ಸುಖದೇವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹುತಾತ್ಮರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಈ ವೀರಯೋಧರ ತ್ಯಾಗ ಬಲಿದಾನದ ಪರಿಣಾಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಚಾಲನೆ ದೊರೆಯಿತು ಎಂದರು.
ಇಂದು ಹುತಾತ್ಮರ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ವತಿಯಿಂದ ಧಾರವಾಡ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಭಾರತೀಯ ಜನತಾ ಪಕ್ಷದ ಧಾರವಾಡ ಸುಭಾಷ್ ರಸ್ತೆಯ ಕಚೇರಿ ಎದುರು ಆರಂಭವಾದ ಪಂಜಿನ ಮೆರವಣಿಗೆ ಧಾರವಾಡದ ಪ್ರಮುಖ ರಸ್ತೆಗಳಾದ ಸುಭಾಷ್ ರಸ್ತೆ ರಾಣಾ ಪ್ರತಾಪ ಸರ್ಕಲ ಕಾರ್ಪೊರೇಷನ್ ಸರ್ಕಲ ಮೂಲಕ ಪಕ್ಷದ ಕಚೇರಿ ಎದುರು ಸಂಪನ್ನವಾಯಿತು.
ಈ ಸಂದರ್ಭದಲ್ಲಿ ಹುತಾತ್ಮರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಭಾರತ ಮಾತಾ ಕೀ ಜೈ ಪೋಷಣೆಗಳು ಪಂಜಿನ ಮೆರವಣಿಗೆಯಲ್ಲಿ ಮೊಳಗಿದವು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೀತಮ ನಾಯಕ ಬಸವರಾಜ ಗರಗ ಶಕ್ತಿ ಹಿರೇಮಠ ಪವನ ಥಿಟೆ ಹಾಗು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು