ಸ್ಥಳೀಯ ಸುದ್ದಿ

ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಬಂಧನ ಹಿನ್ನೆಲೆ ಪತ್ರಕರ್ತರ ಬೃಹತ್ ಪ್ರತಿಭಟನೆ

ದಾವಣಗೇರಿ

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಅವರ ಬಿಡುಗಡೆ ಹಾಗೂ ದಾವಣಗೇರಿ ಎಸಪಿ ರಿಷ್ಯಂತ್ ಅವರ ವರ್ಗಾವಣೆಗೆ ಆಗೃಹಿಸಿ ಇಂದು ದಾವಣಗೇರಿಯಲ್ಲಿ ರಾಜ್ಯದ ಬೇರೆ ಬೇರೆ ಭಾಗದ ಪತ್ರಕರ್ತರು ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ರು.

ದಾವಣಗೇರಿ ಜಯದೇವ ಸರ್ಕಲ್ ನಿಂದ ಮೆರವಣಿಗೆ ಆರಂಭವಾಗಿ ಸುಮಾರು 5 km ವರೆಗೂ ಪಾದಯಾತ್ರೆ ನಡೆದು, ಐಜಿಪಿ ಕಚೇರಿವರೆಗೆ ಮೆರವಣಿಗೆ ಸಾಗಿ ಐಜಿಪಿ ತ್ಯಾಗರಾಜ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂವಿಧಾನದ 4 ನೇ ಅಂಗ ಕುಸಿಯುತ್ತಿದೆ. ಪತ್ರಕರ್ತರಿಗೆ ಅನ್ಯಾಯವಾಗುತ್ತಿದೆ. ಮೆಹಬೂಬ ಮುನವಳ್ಳಿ ಪ್ರಕರಣದಲ್ಲಿ ಕುಟುಂಬ ಬಹಳಷ್ಟು ನೊಂದಿದೆ. ನೊಂದವರ ಪರವಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಯಾವತ್ತಿಗೂ ಇರುತ್ತೆ. ಈ ಬಗ್ಗೆ ನಾಳೆ ಬೆಂಗಳೂರಿಗೆ ತೆರಳಿ ಡಿಜಿಪಿ ಪ್ರವೀಣ ಸೂದ್ ಹಾಗೂ ಎಡಿಜಿಪಿ ಅಲೋಕಕುಮಾರ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ರಾಜ್ಯಾಧ್ಯಕ್ಷ ಬಂಡೆ ಮಲ್ಲಿಕಾರ್ಜುನ ಹೇಳಿದ್ರು.

ದಾವಣಗೇರಿ ಎಸಪಿ ಉದ್ದೇಶಪೂರ್ವಕವಾಗಿ ಮೆಹಬೂಬ ಮುನವಳ್ಳಿ ಬಂಧನ ಮಾಡಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಸಿಐಡಿ ತನಿಖೆ ಆಗಿ ಸತ್ಯಾಸತ್ಯತೆ ಸಮಾಜಕ್ಕೆ ಗೊತ್ತಾಗಬೇಕು. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಮನವಿ ಮಾಡಿದ್ರು.

ಇದೇ ವೇಳೆ ಮಾತನಾಡಿದ ಐಜಿಪಿ ಮಾತನಾಡಿ ಪೊಲೀಸ ಅಧಿಕಾರಿಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ , ಪೊಲೀಸ್ ಹಕ್ಕಗಳ ಹೋರಾಟಗಾರ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್, ಜಯಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಹಾಗೂ ಪತ್ರಕರ್ತರ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *