ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಹಳೇ ಹುಬ್ಬಳ್ಳಿ ಪೊಲಿಸ್ ಠಾಣೆಗೆ ಸುರೇಶ್ ಯಳ್ಳೂರ!

powercity news :

ಹುಬ್ಬಳ್ಳಿ : ಹಳೆಹುಬ್ಬಳ್ಳಿಯ ಪೊಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ ಚವ್ಹಾಣ್ ವರ್ಗಾವಣೆಯ ನಂತರ ಅವರ ಸ್ಥಾನಕ್ಕೆ ಆಗಮಿಸಿರುವ ಸುರೇಶ ಯಳ್ಳೂರ ಅವರನ್ನು ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಹೂ, ಮಾಲೆ,ಮೈಸೂರು ಪೇಠ ತೊಡಿಸುವ ಮೂಲಕ ಸುರೇಶ್ ಯಳ್ಳೂರ ಅವರನ್ನು ಬರಮಾಡಿಕೊಳ್ಳಲಾಗಿದೆ.

ಈ ವೇಳೆ ಸಮತಾ ಸೇನಾ ಸಂಘಟನೆಯ ಗುರುನಾಥ ಉಳ್ಳಿಕಾಶಿ ಮಾತನಾಡಿ. ಹು ಧಾ ಮಹಾನಗರ ಪೊಲೀಸ್ ಇಲಾಖೆಯಲ್ಲಿ ಇ ಹಿಂದೆಯೂ ಸೇವೆ ಸಲ್ಲಿಸಿದ್ದಾರೆ. ಮತ್ತೋಮ್ಮೆ ಇ ಭಾಗದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಪೊಲೀಸ್ ನಿರೀಕ್ಷಕರಾಗಿ ಆಗಮಿಸಿ ಅಧಿಕಾರ ಗ್ರಹಣಮಾಡಿದ ಶ್ರೀ ಸುರೇಶ ಎಳ್ಳೂರವರನ್ನು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ವತಿಯಿಂದ ಗೌರವದ ಸನ್ಮಾನ ನೆರವೇರಿಸಲು. ಮುಂದೆ ಬಂದು ಹಾರ-ತುರಾಯಿಗಳಿಂದ ಸ್ವಾಗತಿಸಲು ಬಂದಿದ್ದನ್ನು ಸುರೇಶ ಯಳ್ಳೂರವರು ವಿನಯ ಪೂರ್ವಕವಾಗಿ ಬೇಡ ಎಂದು ನಿರಾಕರಿಸಿದರು. ನಂತರ ಅವರು ಇ ಭಾಗದಲ್ಲಿನ ಸಮಸ್ಯೆಗಳನ್ನು ತಿಳಿಸಿ ಎಂದು ಸನ್ಮಾನ ನಿರಾಕರಿಸುವುದನ್ನ ಅವರಿಗಿರುವ ಕರ್ತವ್ಯ ಪಾಲನೆಯ ಪ್ರಜ್ಞೆ ಎದ್ದು ಕಾಣುತ್ತದೆ. ಹಿಗಿರುವಾಗಲೂ ಸಹ ನಾವುಗಳು ಈ ಪೊಲಿಸ್ ಠಾಣೆಯೂ ಶ್ರೀ ಸಿದ್ಧಾರೂಢ ಸದ್ಗುರು ಗಳ ಮಠದ ವ್ಯಾಪ್ತಿಗೆ ಹೊಂದಿ ಕೊಂಡತಿರುವ ಕಾರಣ ಇಲ್ಲಿಗೆ ಸೇವೆಗೆ ಬರುವ ಸಕಲರಿಗೂ ಗೌರವಿಸುವ ನಿಯಮವನ್ನು ವಿವರಿಸಿ ಮನವಿಸಿ ಗೌರವದ ಸ್ವಾಗತ ಕೋರಲಾಗಿದೆ ಎಂದು ತಿಳಿಸಿದರು.

ಸುರೇಶ ಯಳ್ಳೂರವರು ಇ ಹಿಂದೆಯೂ ಅವಳಿನಗರದಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವವಿದ್ದು ಇ ಭಾಗದಲ್ಲಿನ ಅಪರಾಧ ಮತ್ತು ಕಾನೂನು ಬಾಹೀರ ಚಟುವಟಿಕೆಗಳನ್ನು ಹತ್ತಿಕ್ಕಲು ಶ್ರಮಿಸುವ ಭರವಸೆ ನಿಡಿದ್ದಾರೆ.

ಸದರಿ ಸಂಧರ್ಭದಲ್ಲಿ ಸಮತಾ ಸೇನಾ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ವತಿಯಿಂದ ಗುರುನಾಥ ಉಳ್ಳಿಕಾಶಿ,ಸಮಗಾರ ಹರಳಯ್ಯ ಸಮಾಜದ ಶ್ರೀಮತಿ ಲತಾ ತೇರದಾಳ,ಕ್ರಾಂತಿಗೀತೆಗಳ ರೂವಾರಿ ಫಕ್ಕಣ್ಣ ದೊಡ್ಡಮನಿ,ಶ್ರೀ ಭುವನೇಶ್ವರಿ ಸೇವಾ ಸಂಘದ ಮಂಜು ಸಣ್ಣಕ್ಕಿ,ಅಯ್ಯಪ್ಪ ಗುರುಸ್ವಾಮಿಗಳಾದ ಬಸುರಾಜ ನೆವನೂರ,ಶ್ರೀ ಮಂಜುನಾಥ ಹೈಸ್ಕೂಲನ ಟ್ರಷ್ಟಿ ಯಲ್ಲಪ್ಪ ಬಾಗಲಕೋಟಿ,ಲಿಡಕರ ಕಾಲನಿ ಅಧ್ಯಕ್ಷ ಲೋಹಿತ ಗಾಮನಗಟ್ಟಿ,ಮಹಾಮಂಡಳದ ಉಪಾಧ್ಯಕ್ಷರಾದ ಮಂಜಣ್ಣ ಉಳ್ಳಿಕಾಶಿ,ಕೆ.ಎಚ.ಬಿ.ಕಾಲೋನಿಯ ಇಝಾಝ್ಹಮದ್ ಉಪ್ಪಿನ,ಬಾಬರ ಖೋಜೆ,ದೇವಣ್ಣ ಇಟಗಿ,ಸಂತೋಷ ಕದಂ,ಹನುಮಂತ ತಳವಾರ,ನಾಗೇಶ ಕನ್ನಡ ಕ್ರಾಂತಿ ದೀಪದ ರವಿ ಕದಂ,ಇಮ್ತಿಯಾಜ್ ಬಿಜಾಪುರ ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *