ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಸ್ವಾತಂತ್ರ್ಯ ನಡಿಗೆಯ ಅಂತರ ಮರೆತ ಮಾಜಿ ಮೇಯರ್‌ ಗೆ : ಪ್ರತಿಭಟನೆಯ ಎಚ್ಚರಿಕೆ!

ಹುಬ್ಬಳ್ಳಿ: ಅವಳಿನಗರದ ಕೆಲವು ಭಾಗಗಳಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ “ಸ್ವಾತಂತ್ರ್ಯನಡಿಗೆ ಜನಜಾಗೃತಿ ಬೃಹತ್ ಪಾದಯಾತ್ರೆ” ಕಾರ್ಯಕ್ರಮಕ್ಕೆ ಸಂಭಂದಪಟ್ಟಂತೆ. ಕಾಂಗ್ರೆಸ್ ಜಿಲ್ಲಾ ಗ್ರಾಮಿಣ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅನಿಲ ಕುಮಾರ್ ಪಾಟೀಲ್ ಅವರು, ಕಾರ್ಯಕ್ರಮ ಉದ್ದೇಶಿತ ಬ್ಯಾನರ್ ನಲ್ಲಿ ಮ್ಯಾಪ್ ತೋರಿಸುವ ಭರದಲ್ಲಿ. ಮಾಹಾತ್ಮಾ ಗಾಂಧಿಜಿಯವರ ಫೊಟೊ ಇದ್ದರೆ. ಅದರ ಕೇಳಭಾಗದ ಮಟ್ಟದಲ್ಲಿ ಸಂವಿಧಾನ ಶಿಲ್ಪಿ ಡಾ!! ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರದ ಸಮೇತ ಲೋಕೇಷನ್ ತೊರಿಸುವ ಬ್ಯಾನರ್ ನಲ್ಲಿ, ಪೂರ್ಣ ಪ್ರಮಾಣದ ಭಾವಚಿತ್ರ ಇರುವ ಅನೀಲ ಕುಮಾರ್ ಪಾಟೀಲ್ ಅವರ ಭಾವಚಿತ್ರ ಇದೀಗ, ದಲಿತಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿವಾದಕ್ಕೆ ಕಾರಣವಾದ ಬ್ಯಾನರ್ ಚಿತ್ರ!

ಹೌದು ಮಾಜಿ ಮೇಯರ್ ಮೇಲೆ ಗರಂ ಆಗಿರುವ ಕರ್ನಾಟಕ ದಲಿತ ವಿಮೋಚನಾ ಸಂಘಟನೆಯ ಕಾರ್ಯಕರ್ತರು
ಸದಾ ಸಮಾಜ ಮುಖಿ ಚಟುವಟಿಕೆಯಲ್ಲಿರುವ ಅನಿಲಕುಮಾರ ಪಾಟೀಲ ಸಂವಿಧಾನ ಸಿಲ್ಪಿ ಡಾ! ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ವೆಸಗಿದ್ದಾರೆ. ರಾಷ್ಟ್ರ ಪಿತಾಮಹರನ್ನು ರೂಟ್ ಮ್ಯಾಪ್ ಗೆ ಬಳಸಿಕೊಂಡದ್ದು ಎಷ್ಟು ಸರಿ? ಎಂದು ಪ್ರಶ್ನಸಿರುವ ದಲಿತ ಮುಖಂಡರು.ಈ ಕೂಡಲೆ ಕಾಂಗ್ರೆಸ್ ಮುಖಂಡ ಬಹಿರಂಗ ಕ್ಷಮೆಯಾಚಿಸಬೇಕು! ಇಲ್ಲವಾದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *