ಸ್ಥಳೀಯ ಸುದ್ದಿ
ಸ್ವಚ್ಛ ನಗರಕ್ಕಾಗಿ ಬೀದಿ ನಾಟಕ ಪ್ರದರ್ಶನ
ಧಾರವಾಡ
ಧಾರವಾಡ ನಗರವನ್ನು ಸ್ವಚ್ಚ ನಗರವನ್ನಾಗಿ ಮಾಡಲು ಪಾಲಿಕೆ ಅಧಿಕಾರಿಗಳು ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.
ಸಾರ್ವಜನಿಕರಿಗೆ ಬೀದಿ ನಾಟಕಗಳ ಮೂಲಕ ತಿಳುವಳಿಕೆ ಹೇಳುತ್ತಿದ್ದಾರೆ.
ಧಾರವಾಡದ ಜಯನಗರದಲ್ಲಿ
Prakash malligwad ಕಲಾ ತಂಡ ಹಾಗೂ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ್ ಹಾಗೂ ಮಜಾ ಭಾರತ ಖ್ಯಾತಿಯ ಬಸವರಾಜ್ ಅವರು ಬೀದಿ ನಾಟಕ ಪ್ರದರ್ಶನ ಮಾಡಿದ್ರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಜ್ಯೋತಿ ಪಾಟೀಲ್ ಹಾಗೂ ವಲಯ ಆಯುಕ್ತರಾದ ಫಕ್ಕಿರೇಶ ಇಂಗಳಗಿ ಹಾಗೂ ಸಿಬ್ಬಂದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿರಿದ್ದರು.