ಸ್ಥಳೀಯರಿಗೆ ಟೋಲ್ ಸಿಬ್ಬಂದಿ ಕಿರಿಕಿರಿ: ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು!
powercity news:
ಅಣ್ಣಿಗೇರಿ:
ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಯಾವುದೇ ಊರಿನಲ್ಲಿ ಟೋಲ್ ನಿರ್ಮಾಣ ಮಾಡಿದರೂ ಅಕ್ಕಪಕ್ಕದ ಊರಿನವರಿಗೆ ಮಾತ್ರ ಕಿರಿ ಕಿರಿ ಆಗುತ್ತಲೇ ಇರುತ್ತದೆ.
ಅಲ್ಲದೇ ಕೆಲಸ ಕಾರ್ಯದ ನಿಮಿತ್ತ ಪದೇ ಪದೇ ಓಡಾಡುವವರಿಗೆ ಟೋಲ್ ಸಿಬ್ಬಂದಿ ತೊಂದರೆಯನ್ನುಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡು ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ನಲವಡಿ ಟೋಲ್ ನಲ್ಲಿ ನಡೆದಿದೆ.
ಹೌದು..ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ನಲವಡಿ ಟೋಲ್ ನಲ್ಲಿ ಅಕ್ಕಪಕ್ಕದ ಊರಿನವರಿಗೆ ಸ್ಥಳೀಯರು ತಮ್ಮ ಹೊಲಗಳಿಗೆ ಹಾಗೂ ಊರುಗಳಿಗೆ ಓಡಾಡುವ ಸಮಯದಲ್ಲಿ ಕಿರಿಕಿರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಸಾಯಿ ಟೋಲ್ ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇ ಹಿಂದೆಯೂ ಟೋಲ್ ನವರ ಕಿರುಕುಳಕ್ಕೆ ಸಿಡಿದೆದ್ದಿದ್ದ ಇಗೀನ ಶಾಸಕ ಎನ್ ಎಚ್ ಕೋನರೆಡ್ಡಿ ಕೂಡ ಗ್ರಾಮಸ್ಥರ ಧ್ವನಿಯಾಗಿದ್ದರು ಎಂಬುದನ್ನ ಇಲ್ಲಿ ಸ್ಮರಿಸಬಹುದು.
ಆದರೆ ಈಗಾಗಲೇ ಸಾಕಷ್ಟು ಬಾರಿ ವಾಹನಗಳ ಬಗ್ಗೆ ದಾಖಲೆ ನೀಡಿದರೂ ಪ್ರತಿ ಸಾರಿಯೂ ಕೂಡ ವಾಹನಗಳ ದಾಖಲೆ ಒದಗಿಸುವಂತೆ ಕಿರಿಕಿರಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಹೊಲದ ಕೆಲಸಕ್ಕೆ ಹೋಗುವವರಿಗೆ ಹಾಗೂ ಬೇರೆ ಊರುಗಳಿಗೆ ಹೋಗುವ ಸ್ಥಳೀಯರಿಗೆ ತೊಂದರೆಗಳನ್ನು ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.