ಕಲ್ಬುರ್ಗಿರಾಜಕೀಯರಾಜ್ಯಸ್ಥಳೀಯ ಸುದ್ದಿ

ಸೋಲು-ಗೆಲುವು ಎನೆ ಇರ್ಲಿ ಸದಾಕಾಲ ಜನ ಸೇವಕನಾಗಿರುವೆ – ಆರ್. ಡಿ. ಪಾಟೀಲ!

powercity news /ಕಲಬುರ್ಗಿ/ಅಫಜಲಪೂರ: ಪಟ್ಟಣದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಶ್ರೀ ಆರ್. ಡಿ. ಪಾಟೀಲ ಅವರು ನಗರದ ಬಸವೇಶ್ವರ ವೃತ್ತದಿಂದ ಮಳೇಂದ್ರ ಮಠದ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದರು. ಈ ಪಾದಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಆರ್. ಡಿ. ಪಾಟೀಲ ಅಭಿಮಾನಿ ಬಳಗದವರು ಪಾಲ್ಗೊಂಡಿದ್ದರು.

ಪಟ್ಟಣದ ನ್ಯಾಶನಲ್ ಪಂಕ್ಷನ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಡಿ. ಪಾಟೀಲರು ಈ ಬಾರಿ ಅಫಜಲಪೂರ ಮತಕ್ಷೇತ್ರ ಜನರು ಹಳೆಯ ರಾಜಕೀಯ ಆಡಳಿತ ನೋಡಿ ಬೇಸತ್ತು ಹೋಗಿದ್ದಾರೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಹೀಗಾಗಿ ಈ ಸಲ ಬದಲಾವಣೆ ಬಯಸಿದ್ದಾರೆ ನನಗೆ ಆಶೀರ್ವಾದ ಮಾಡಿದರೆ ಅಫಜಲಪೂರ ಮತಕ್ಷೇತ್ರ ಒಂದು ರಾಜ್ಯ ಮಟ್ಟದಲ್ಲಿ ಮಾದರಿಯ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ ಹಾಗೂ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇನೆ ಎಂದರು.

ಹಾಲಿ ಹಾಗೂ ಮಾಜಿ ಶಾಸಕರು ಇಷ್ಟು ದಿವಸ ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡಿದ್ದಾರೆ ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ ಎಂದು ಅವರ ವಿರುದ್ದ ಕಿಡಿ ಕಾರಿದರು. ನಾನು ರಾಜಕೀಯದಲ್ಲಿ ಸೋತರೂ ಗೆದ್ದರೂ ಕೂಡ ಸದಾಕಾಲ ಜನರ ಸೇವೆಯಲ್ಲಿ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಮಹಾಂತೇಶ ಪಾಟೀಲ ಮಾಜಿ ಹಾಗೂ ಹಾಲಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡಿದ್ದಾರೆ ಅಫಜಲಪೂರ ತಾಲ್ಲೂಕಿನ ಯಾವುದೇ ಒಂದು ಹಳ್ಳಿ ಕೂಡ ಅಭಿವೃದ್ಧಿ ಆಗಿಲ್ಲ. ಹಾಗೂ ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಕಾರ್ಯಕರ್ತರನ್ನು ಬಳಸಿಕೊಂಡು ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಅವರ ವಿರುದ್ಧ ಕಿಡಿಕಾರಿದರು.

ಈ ಭಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸಹೋದರ ಆರ್. ಡಿ. ಪಾಟೀಲರಿಗೆ ಮತ ನೀಡುವುದರ ಮುಖಾಂತರ ಅಫಜಲಪೂರ ಅಭಿವೃದ್ಧಿಗೆ ಅಡಿಪಾಯ ಹಾಕೋಣ ಎಂದರು. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಪಟ್ಟಣದ ಹಲವಾರು ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *