ಧಾರವಾಡ
ಸೋಮವಾರದಿಂದ ಜಿಲ್ಲೆಯಲ್ಲಿ ಶಾಲೆಗಳು ಪುನರಾರಂಭ
ಧಾರವಾಡ
ಸರಕಾರದಿಂದ ಈ ಮೊದಲಿನ ಆದೇಶದಲ್ಲಿ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದರೆ, ತಾಲೂಕು ಒಂದು ಘಟಕವಾಗಿ ಪರಿಗಣಿಸಿ, ಶಾಲೆಗಳನ್ನು ಬಂದ್ ಮಾಡಲು ಮಾರ್ಗಸೂಚಿಗಳನ್ನು ನೀಡಿತ್ತು.
ಈಗ ಆದೇಶ ಪರಿಷ್ಕರಿಸಿ, ಕೋವಿಡ್ ಕಂಡು ಬಂದ ಶಾಲೆಯನ್ನು ಮಾತ್ರ ಒಂದು ಘಟಕವಾಗಿ ಪರಿಗಣಿಸಲು ಆ ಶಾಲೆಗೆ ಮಾತ್ರ ರಜೆ ನೀಡಿ,
ಸೀಲ್ ಡೌನ್ ಮಾಡಲು ತಿಳಿಸಲಾಗಿದೆ.
ಅದರಂತೆ ಧಾರವಾಡ ಜಿಲ್ಲಾಧಿಕಾರಿಗಳು ಇಂದು ಪರಿಷ್ಕೃತ ಆದೇಶ ಹೊರಡಿಸಿದ್ದು, ಸೋಮವಾರದಿಂದ ಶಾಲೆಗಳನ್ನು ಪುನರಾರಂಭ ಮಾಡಲು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸೀಲ್ ಡೌನ್ ಆಗಿರುವ ಜಿಲ್ಲೆಯಲ್ಲಿನ ಶಾಲೆಗಳು ಅಲ್ಲಿನ ಕೋವಿಡ್ ಸಂಖ್ಯೆಗಳಿಗೆ ಅನುಗುಣವಾಗಿ 3, 5 ಮತ್ತು 7 ಸೀಲ್ ಡೌನ ಆಗಿದ್ದು, ಸೀಲ್ ಡೌನ್ ಅವಧಿ ಮುಗಿದ ನಂತರ, ಸ್ವಚ್ಚಗೊಳಿಸಿ ಶಾಲೆ ಮರು ಆರಂಭವಾಗುತ್ತವೆ.