ಸಾಯಿಬಾಬಾ ಮಂದಿರದಲ್ಲಿ ಲಕ್ಷ ದೀಪೂತ್ಸವ
ಧಾರವಾಡ
ಏನಾದರೂ ಆಗು ಮೂದಲು ಮಾನವನಾಗು ಪ್ರೀತಿ,ವಾತ್ಸಲ್ಯ,ಕರುಣೆಯ ಜ್ಯೋತಿ ನಿನ್ನಲ್ಲಿ ಬೆಳಗಲಿ ಎಂದು ನವದೆಹಲಿ ತೋಂಟದಾರ್ಯ ಶಾಖಾಮಠದ
ಪರಮಪೂಜ್ಯ ಶ್ರೀಜಗದ್ಗುರು ಡಾ. ಮಹಾಂತ ಸ್ವಾಮಿಗಳು, ಗಾಂಧಿನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಲಕ್ಷ ದೀಪೂತ್ಸವ ಕಾಯ೯ಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ನೆರೆದ ಭಕ್ತರಿಗೆ ಆಶಿವ೯ಚನದಲ್ಲಿ ನುಡಿದರು.
ನಿಮ್ಮ ಕುಟುಂಬದ ಹಾಗೂ ಸಮಾಜದ ಪ್ರತಿಯೊಂದು ವ್ಯಕ್ತಿ ಯಲ್ಲಿ ಪ್ರೀತಿಯ ಜ್ಯೋತಿ ಬೆಳಗಿಸಿ ಅಂದರೆ ಮಾತ್ರ ಜೀವನ ಪರಿಪೂಣ೯ ,ಯಾವ ರೀತಿ ಹೂ ರಾತ್ರಿ ಮೊಗ್ಗಾಗಿ ,ಪ್ರಾತ:ಕಾಲದಲ್ಲಿ ಅರಳಿ, ಸಾಯಂಕಾಲ ಬಾಡಿ ತನ್ನ ಬಾಳನ್ನು ಮುಡಪಾಗಿಟ್ಟು ದೇವರ ಹಾರವಾಗಿ,ಸುಮಂಗಲಿ ಯರ ಸೌಂದರ್ಯ ವ್ರದ್ದಿಸಲು ಸಹಕಾರಿಯಾಗಿ, ಮೃತ ವ್ಯಕ್ತಿ ಗೂ ತನ್ನ ಸುಮಧುರತೆ ನೀಡುತ್ತದೆಯೂ ಅದೇ ರೀತಿ ಮನುಷ್ಯ ರಾದ ನಾವು ಎಷ್ಟು ದಿನ ಬದುಕಿ ಬಾಳಿದ್ದೆವೆ ಅನ್ನುವುದಕ್ಕಿಂತ ಎಸ್ಟು ಜನರಿಗೆ ನಮ್ಮಿಂದ ಅನುಕೂಲ,ಉಪಯೊಗ,
ಸಹಾಯ,ದಾನ,ಧಮ೯ ಮಾಡಿದ್ದೆಂಬುವದು ಮುಖ್ಯ ಎಂದರು.
ಮಕ್ಕಳಿಗೆ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ ಅವರಿಗೆ ನಮ್ಮ ಸಂಸ್ಕೃತಿ ,ಆಧ್ಯಾತ್ಮಿಕ ಜ್ಞಾನ ನೀಡಿ ಎಂದರು.
ಧಾರವಾಡದ ಎ.ಸಿ.ಪಿ.ಅನುಷಾ ಜಿ. ಮಾತನಾಡಿ ಆಧ್ಯಾತ್ಮದ ಬಗ್ಗೆ ಗುರುಗಳು ಆಶಿವ೯ಚನ ನೀಡಿದ್ದಾರೆ,ನಾನು ಒಬ್ಬಳು ಪೋಲಿಸ್ ಅಧಿಕಾರಿಯಾಗಿ ಹೇಳುವದೇನೆಂದರೆ ಮಹಿಳೆಯರು, ಬೆಳಿಗ್ಗೆ ಹಾಗೂ ಸಾಯಂಕಾಲ ವಾಯು ವಿಹಾರಕ್ಕೆ ಹೋಗುವಾಗ ಚಿನ್ನಾಭರಣ ಪ್ರದಶ೯ನ ಬೇಡ ಆದಷ್ಟು ಗುಂಪಾಗಿ ಹೋಗುವದು ಸುರಕ್ಷಿತ.
ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಂಪೂರ್ಣ ಮಾಹಿತಿ, ಭಾವಚಿತ್ರ ಹಾಕಿ ತೊಂದರೆಗೆ ಅನುವು ಮಾಡಕೂಡದಿರಿ.
ಫೋನ್ ಕರೆಗಳು ಬಂದಾಗ ಆಧಾರ ಹಾಗೂ ಓಟಿಪಿ ಮಾಹಿತಿ ಯಾರಿಗೂ ನೀಡದಿರಿ. ಈ ಎಲ್ಲ ಸುರಕ್ಷಿತ ಕ್ರಮ ಅನುಸರಿದರೆ ಮಾತ್ರ ಸೈಬರ್ ಅಪರಾಧ ತಡೆಗಟ್ಟಲು ಸಾಧ್ಯ ಎಂದರು.
ಗುರುರಾಜ ಹುಣಶಿಮರದ,ಮಾಜಿ ಶಾಸಕ ಬಿ ಆರ್ ಯಾವಗಲ್, ಪ್ರೋಬಸ್ ವೆಲ್ಫೇರ್ ಟ್ರಸ್ಟ ಹಾಗೂ ಗಾಂಧಿನಗರ ಸಾಯಿಬಾಬಾ ದೇವಾಲಯ ಅಧ್ಯಕ್ಷರು ಎಸ್.ಎಸ್. ರೋಣದ ,ನಾರಾಯಣ ಗೋಪಡೆ೯,ಗಣಪತರಾವ ಮುಂಜಿ,ಎನ್ ಡಿ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಸಾಯಿಬಾಬಾ ಸವ೯ಧಮ೯ ಸದ್ಬಕ್ತ ಮಂಡಳಿಯ ಎನ್.ಡಿ. ಪಾಟೀಲ ಶ್ರೀಮತಿ ಮಂಜುಳಾ ವಿಶಾಲ ಮರಡಿ , ವಿರೂಪಾಕ್ಷಪ್ಪ ಕೋಪರ್ಡ ಶ್ರೀಮತಿ ರೇಖಾ ನಾರಾಯಣ ಕೋಪರ್ಡ, ಸತೀಶ ಮತ್ತು ಹರೀಶ , ಗೋರ್ಪಡೆ, ಟ್ರಸ್ಟಿನ ಕಾಯ೯ದಶಿ೯ ಎಮ್.ಯು. ಕರ್ಜಗಿ, ಸರ್ವ ಧರ್ಮ ಮಂಡಳಿ ಎಸ್.ಬಿ. ಮತ್ತೂರು , ಶ್ರೀಮತಿ , ಆರ್ . ನಿರ್ಮಲಾ , ಶ್ರೀಮತಿ ವಿಜಯಾ ಪಡೂರ , ಶ್ರೀಮತಿ , ಶೀಲಾ ಈರಡ್ಡಿ ಮನೋಜ ಸಂಗೋಳ್ಳಿ, ಪ್ರಕಾಶ ಪಾಟೀಲ , ರಾಜು ಸೂರ್ಯವಂಶಿ, ಜಾಧವ, ರವಿ ಹಣಶಿಮಠದ ಮತ್ತು ಗಾಂಧಿನಗರದ ಲಲಿತ ಕಸ್ತೂರಿಬಾ ಮಹಿಳಾ ಮಂಡಳಿಯ ಸದಸ್ಯರು, ಗಾಂಧಿನಗರದ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಗುರುರಾಜ ಹುಣಶಿಮರದ , ಶ್ರೀ ವೀರ ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಪ್ರಸನ್ನ ದೇಶಪಾಂಡೆ , ಶ್ರೀ ಬಂಡಮ್ಮ ದೇವಸ್ಥಾನದ ಅಧ್ಯಕ್ಷರಾದ ಜಿ.ಎಸ್.ಮುಂಜಿ, ವಿನಾಯಕ ದೇವಾಲ ಅಧ್ಯಕ್ಷರಾದ ಡಾ.ಆರ್.ಎನ್.ನಾಡಗೌಡರ ಮತ್ತು ಆಡಳಿತ ಮಂಡಳಿಯವರು ಇವರೆಲ್ಲರೂ ಶ್ರೀ ಸಾಯಿಬಾಬಾ ದೇವಾಲಯದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಯ೯ಕ್ರಮ ಯಶಸ್ವಿಗೂಳಿಸಲು ಸಹಾಯ ಸಹಕಾರ ನೀಡಿದರು.
ಪ್ರಾರ್ಥನೆ
ಶ್ರೀಮತಿ ನಾಗರತ್ನಾ ಹಡಗಲಿ ಸ್ವಾಗತ ಎಸ್ ಪಿ ಕುಲಕರ್ಣಿ,ಅತಿಥಿಗಳ ಪರಿಚಯ ಮನೋಜ ಸಂಗೂಳ್ಳಿ,ವಂದನಾಪ೯ಣೆ ಯನ್ನು ಎಮ್.ಯು.ಕರ್ಜಗಿ ಮಾಡಿದರು.