ಸ್ಥಳೀಯ ಸುದ್ದಿ
ಸಹೋದರಿಯರಿಬ್ಬರ ಬರ್ಬರ ಹತ್ಯೆ
ಬಾಗಲಕೋಟೆ: ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ವರದಿಯಾಗಿದೆ.
ಯಲ್ಲವ್ವ ಭುಜಂಗ(40) ಹಾಗು ಬೌರವ್ವ ಭುಜಂಗ(37) ಕೊಲೆಯಾದ ಸಹೋದರಿಯರು ಎಂದು ತಿಳಿದು ಬಂದಿದೆ.
ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.