ಸ್ಥಳೀಯ ಸುದ್ದಿ
ಸಂಸ್ಕೃತಿ ಶಿಶು ಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ಧಾರವಾಡ
ಧಾರವಾಡದ ಸಂಸ್ಕೃತಿ ಶಿಶುಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿರುವ ಶಿಶು ಮಂದಿರದಲ್ಲಿ 4 ವರ್ಷದಿಂದ 6 ವರ್ಷದ ಮುದ್ದು ಮಕ್ಕಳು ದೇಶ ಭಕ್ತಿ ಗೀತೆಗಳನ್ನು ಹಾಡಿದ್ರು.
ಸಂಸ್ಥೆಯ ಸಂಸ್ಥಾಪಕಿ ಮೃಣಾಲ್ ಜೋಶಿ ನೇತೃತ್ವದಲ್ಲಿ ಮಕ್ಕಳಿಗೆ ವೀರಯೋಧರ ಬಗ್ಗೆ ಕಾರ್ಗಿಲ್ ಯುದ್ದಕ್ಕೆ ಸಂಬಂಧಿಸಿದಂತೆ, ದೃಶ್ಯಗಳನ್ನು ವಿಡಿಯೋ ಮೂಲಕ ತೋರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಿಕಿಯರಾದ ಅರುಂಧತಿ, ಸಂಗೀತಾ ಜಾಧವ, ಜ್ಯೋತಿ ಹಾಗೂ ಅಲ್ಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.