ಸ್ಥಳೀಯ ಸುದ್ದಿ

ಶಾಸಕ ಅಮೃತ ದೇಸಾಯಿ- ಮೇಯರ್ ಅಂಚಟಗೇರಿ ಅವರಿಂದ ಯೋಗ ದಿನಾಚರಣೆ

ಧಾರವಾಡ

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಧಾರವಾಡದಲ್ಲೂ ಆಚರಣೆ ಮಾಡಲಾಯಿತು.

ಧಾರವಾಡ ನಗರದ ಕೊಪ್ಪದಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಚಾಲನೆ ನೀಡಿದರು.

ಯೋಗಮಯಂ ಕೇಂದ್ರ ಮತ್ತು ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮಕ್ಕೆ ಚಾಲನೆ ನಂತರ ವೇದಿಕೆಯ ಮೇಲೆ ಶಾಸಕ ಅಮೃತ ದೇಸಾಯಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವರು ಯೋಗವನ್ನು ಮಾಡುವ ಮೂಲಕ ಸಾಮೂಹಿಕ ಯೋಗ ಪ್ರದರ್ಶನವನ್ನು ಮಾಡಿದರು.
ಇದೇ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರೊಂದಿಗೆ ಯೋಗವನ್ನು ಮಾಡಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಯೋಗವನ್ನು ಮಾಡುವ ಮೂಲಕ ಶಾಸಕ ಅಮೃತ ದೇಸಾಯಿ ಮತ್ತು ಮೇಯರ್ ಅವರು ಯೋಗಾಸನ ಮಾಡಿ ಯೋಗದ ಮಹತ್ವ ತಿಳಿಸಿಕೊಟ್ಟರು.


ಇನ್ನೂ ಈ ಒಂದು ಸಂಧರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ,
ಡಾ ರಾಮನಗೌಡರ, ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮಲ್ಲಿಕಾರ್ಜುನ ಬಾಳಿಕಾಯಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕರು ಉಪಸ್ಥಿತರಿದ್ದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅರ್ಥಪೂರ್ಣ ಆಚರಣೆಗೆ ಮೆರುಗು ನೀಡಿ ಸಾಕ್ಷಿಯಾದರು.

Related Articles

Leave a Reply

Your email address will not be published. Required fields are marked *