ಶಹನಾಯಿ ಕಲಾವಿದ ವೆಂಕಪ್ಪ ಭಂಜತ್ರಿಗೆ ಆತ್ಮೀಯ ಸನ್ಮಾನ
ಹುಬ್ಬಳ್ಳಿ
ಕರ್ನಾಟಕ ರಕ್ಷಣಾ
ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಹುಬ್ಬಳ್ಳಿ ತಾಲೂಕ ಶೆರೆವಾಡ ಗ್ರಾಮದಲ್ಲಿ ಸನ್ಮಾನ ಸಮಾರಂಭ ನಡೆಯಿತು.
ಶಹನಾಯಿ ಮಾಂತ್ರಿಕ ಶಹನಾಯಿ ಕಲಾವಿದ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದ ಶ್ರೀ ವೆಂಕಪ್ಪ ಭಜಂತ್ರಿಯವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಕ್ಷೇತ್ರಕ್ಕೆ ಕೊಡಮಾಡಿದ ಈ ಪ್ರಶಸ್ತಿ ವೆಂಕಪ್ಪ ಭಜಂತ್ರಿಯವರು ಪಡೆದಿದಕ್ಕೆ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಅದೇ ವೇದಿಕೆ ಮೇಲೆ ಬಸವರಾಜ್ ನಿಮ್ಮಣ್ಣ ಭಜಂತ್ರಿ ಅವರು ಸುಮಾರು 21 ವರ್ಷ ಬಿ ಎಸ್ ಎಫ್ ನಲ್ಲಿ ಸೇವೆ ಸಲ್ಲಿಸಿ ದಿನಾಂಕ 6/11/21 ರಂದು ನಿವೃತ್ತಿ ಹೊಂದಿದ್ದಾರೆ ಅವರಿಗೂ ಕೂಡ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಶೆರೇವಾಡ ಗ್ರಾಮದ ಅಂಬೇಡ್ಕರ ಭವನದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರವೇ ಕಾರ್ಯಕರ್ತರಾದ ಇರ್ಫಾನ್ ಕಮಾನ್ ಗಾರ್ ಮಂಜುನಾಥ್ ಬಡಿಗೇರ, ಲಕ್ಷ್ಮಣ ಬೇಜವಾಡ, ರವಿ ನೂರು ಮೈಬೂಬ್, ಅಂಚನಾಳ ಸುರೇಶ್, ಖಾನಾಪುರ್ ಚಂದ್ರಶೇಖರ್, ಕೊರವರ ಶಶಿಕಾಂತ್ ಯಳಮಲಿ ಮಂಜುನಾಥ ಬಳ್ಳಾರಿ ಚಂದ್ರು ರಮೇಶ್ ಭಜಂತ್ರಿ ಗುರು ಅಂಗಡಿ
ನಿಜಾಂ ಕಮಾನ್ ಗಾರ್ ಉಪಸ್ಥಿತರಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ
ಹುಬ್ಬಳ್ಳಿ ತಾಲೂಕ ಅಧ್ಯಕ್ಷ
ರವಿ ಆರ್ ಬೇಜವಾಡ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.