ಧಾರವಾಡ

ವಿಶ್ವ ಪರಂಪರೆಯ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಧಾರವಾಡ

ನಗರದ ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗ, ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಧಾರವಾಡ ವಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಯೋಗದಲ್ಲಿ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವ ಅಂಗವಾಗಿ ವಿಶ್ವ ಪರಂಪರೆಯ ಸಪ್ತಾಹದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ‌.ಗುಡಸಿ ಪಾರಂಪರಿಕ ನಡಿಗೆಯನ್ನು ಉದ್ಘಾಟಿಸಿದರು.


ಭಾರತೀಯ ಪ್ರವಾಸೋದ್ಯಮ ಇಲಾಖೆಯ ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕರಾದ ಮಹಮ್ಮದ್ ಫಾರೂಕ್ ,ಕರ್ನಾಟಕ ವಿವಿಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎಸ್.ರಾಜಶೇಖರ, ಧಾರವಾಡ ವಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಇತಿಹಾಸಕಾರ ವಿಠಲ ಬಡಿಗೇರ, ಕವಿವಿಯ ಸಮಾಜ ವಿಜ್ಞಾನ ನಿಖಾಯದ ಡಿನ್ ರಾದ ಡಾ.ಎಸ್.ಸಿ.ಶೆಟ್ಟರ್, ಇತಿಹಾಸ ‌ತಜ್ಞೆ ರೇಖಾ ಶೆಟ್ಟರ್ ಮತ್ತು ಪ್ರವಾಸೋದ್ಯಮ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಜಗದೀಶ ಕಿವುಡನವರ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *