ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗಾ ಉಚಿತ ಆರೋಗ್ಯ ಶಿಬಿರ ಆಯೋಜನೆ
ಹೂವಿನಹಡಗಲಿ
ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ಉಚಿತ ಆರೋಗ್ಯ ಶಿಬಿರವನ್ನು ಇಂದು ಹೂವಿನಹಡಗಲಿ ಉಪಕಾರಾಗೃಹದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸರ್ಕಾರಿ ಅಭಿಯೋಜಕರಾದ ಶ್ರೀ ಪಿ.ಕಾಳಿಂಗರಾವ್ ಅವರು ನೆರವೇರಿಸಿ, ತಂಬಾಕಿನ ಸೇವೆನೆ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬಿರುತ್ತಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿರುವ ಮನುಷ್ಯ ಇದರ ಸೇವೆನೆಯಿಂದ ಅನಾರೋಗ್ಯಕ್ಕೆ ಈಡಾಗಿ ಮರಣ ಹೊಂದುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿ. ಇದಕ್ಕೆಲ್ಲ ಕಡಿವಾಣ ಬೀಳಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಲಹಾ ಸಮಿತಿಯ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿಗಳು ಮಾತನಾಡಿ, ತಂಬಾಕಿನ ಸೇವನೆ ಯುವಪೀಳಿಗೆಯಲ್ಲಿ ಫ್ಯಾಷನ್ ಆಗಿದೆ. ಈ ಫ್ಯಾಷನ್ ಮುಂದಿನ ದಿನಗಳಲ್ಲಿ ನಮ್ಮ ಯುವಪೀಳಿಗೆಗೆ ಯಾವ ರೀತಿ ಮಾರಣಾಂತಿಕ ಆಗಿರುತ್ತದೆ ಎನ್ನುವುದು ಗೊತ್ತಿರುವುದಿಲ್ಲಾ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಹೂವಿನಹಡಗಲಿ ಉಪಕಾರಾಗೃಹದ ಅಧೀಕ್ಷಕರಾದ ಶ್ರೀ ಶರಣಬಸವ ಇನಾಮದಾರ ಮಾತನಾಡಿ, ತಂಬಾಕು ಜೀವನ ಮೇಲೆ ಯಾವ ರೀತಿ ದುಷ್ಪರಿಣಾಮ ಬಿರುತ್ತೆ. ಬದುಕಿ ಬಾಳಬೇಕಾದ ಯುವಜಾನಂಗವನ್ನು ಹೇಗೆ ಬಲಿಪಡೆಯುತ್ತೆ ಎನ್ನುವುದರ ಬಗ್ಗೆ ಮಾಹಿತಿ ಕೊಟ್ಟರು.
ಪ್ರಾಸ್ತಾವಿಕವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಅಪ್ಜಲ್ ಹಾಗೂ ತಾಲೂಕು ವೈದ್ಯಾಧಿಕಾರಿ ಶ್ರೀ ಅರುಣಕುಮಾರ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸಿದ್ರು.
ಹೂವಿನಹಡಗಲಿ ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ವಿರೇಶ ನಿರೂಪಿಸಿ, ಸ್ವಾಗತಿಸಿ, ವಂದಿಸಿದ್ರು
ಈ ಸಂದರ್ಭದಲ್ಲಿ ನ್ಯಾಯಾಲಯದ ಸಿಬ್ಬಂದಿ ಡಿಕೆಎಂ ಚೆನ್ನಬಸವ, ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾರಾಗೃಹದ ಸಿಬ್ಬಂದಿಗಳು ಹಾಗೂ ಬಂಧಿನಿವಾಸಿಗಳು ಹಾಜರಿದ್ದರು.