ಸ್ಥಳೀಯ ಸುದ್ದಿ
ವಿದ್ಯಾರ್ಥಿಗಳ ಪಾಲಿನ ಆದರ್ಶ ಪ್ರಾಧ್ಯಾಪಕ ಇನ್ನಿಲ್ಲಾ
ಧಾರವಾಡ
ಧಾರವಾಡ ತಾಲೂಕಿನ ಗರಗ ಊರಿನ ಎಸ್.ಜಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಗಂಗಪ್ಪ ಲಮಾಣಿ 22/02/2023 ರಂದು ಅನಾರೋಗ್ಯದ ನಿಮಿತ್ತ ನಿಧನರಾಗಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ. ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು, ಎಸ್.ಜಿ.ಎಂ ಟ್ರಸ್ಟ್ ,ಗರಗ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಉಪನ್ಯಾಸಕ ಬಂಧುಗಳು, ಹಾಗೂ ಸರ್ವ ಸಿಬ್ಬಂದಿ ವರ್ಗ ಪ್ರಾರ್ಥಿಸಿದ್ದಾರೆ.
ರಮೇಶ ಲಮಾಣಿ 15/06/1999 ರಂದು ಸೇವೆಗೆ ಸೇರಿದ್ದು, ಅವರಿಗೆ 50 ವಯಸ್ಸಾಗಿತ್ತು.
ತಂದೆ -ಗಂಗಪ್ಪ
ತಾಯಿ- ಸೋನವ್ವ
ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳು , ಒಬ್ಬ ಸಹೋದರ ಹಾಗೂ ಒಬ್ಬರು ಸಹೋದರಿಯನ್ನು ಬಿಟ್ಟು ಅಗಲಿದ್ದಾರೆ.