ಸ್ಥಳೀಯ ಸುದ್ದಿ
ವಾಹನ ಡಿಕ್ಕಿಯಾಗಿ ನೆಲಕ್ಕೆ ಉರುಳಿದ ಮರ
ಧಾರವಾಡ
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಬೃಹತ್ ಮರವೊಂದು ಬಿದ್ದಿದೆ. ಟ್ಯಾಂಕರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮರ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮರ ತೆರವು ಕಾರ್ಯಾಚರಣೆ ನಡೆದಿದ್ದು, ಸ್ಥಳೀಯರು ಏಕಾಏಕಿ ವಾಹನ ಡಿಕ್ಕಿಯಾಗಿ ಮರ ಬಿದ್ದ ಪರಿಣಾಮ ಮನೆಯಿಂದ ಹೊರ ಬಂದು ನೋಡುವಂತಾಗಿದೆ.