ಸ್ಥಳೀಯ ಸುದ್ದಿ
ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಜೈಲುಪಾಲಾದ ಪೊಲೀಸ ಅಧಿಕಾರಿ
ಧಾರವಾಡ
ಕೆವಲ 6 ಸಾವಿರ ರೂಪಾಯಿ ಲಂಚದ ಆಸೆಗಾಗಿ ಪೊಲೀಸ್ ಅಧಿಕಾರಿಯೊಬ್ಬ ಜೈಲು ಪಾಲಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಲಂಚಬಾಕ ಅಧಿಕಾರಿ ಕೆಎಸ್ಆರಪಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಹೋಮಗಾರ್ಡ ಕಮಾಂಡೆಟ್ ಡಿಪಾರ್ಟ್ಮೆಂಟನ ಹೆಡ್ ಕಾನ್ಸಟೇಬಲ್ ಆಗಿದ್ದು, ಡ್ಯೂಟಿ ಹಾಕುವ ವಿಷಯದಲ್ಲಿ ಹೋಮಗಾರ್ಡ ಒಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹೀಗೆ ಬೇಡಿಕೆ ಇಟ್ಟಾಗ ಧಾರವಾಡದ ಪೊಲೀಸ್ ಠಾಣೆ ಮುಂದೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.
ಅಣ್ಣಿಗೇರಿಯಲ್ಲಿ ಡ್ಯೂಟಿ ಮಾಡುವ ಹೋಮಗಾರ್ಡ ಬೇಸತ್ತು ಎಸಿಬಿ ಅಧಿಕಾರಿಗಳಿಗೆ ದೂರು ಕೊಟ್ಟ ಪರಿಣಾಮ ಲಂಚಬಾಕ ಅಧಿಕಾರಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಹೀಗೆ ಜೈಲು ಪಾಲಾದ ಅಧಿಕಾರಿ ರಮೇಶ ಶಾಂತಗೇರಿ ಆಗಿದ್ದು, ಮಾಡಿದುಣ್ಣೋ ಮಾರಾಯಾ ಎನ್ನುವ ಹಾಗೆ ಈತನ ಪರಿಸ್ಥಿತಿ ಆಗಿದೆ.