ಸ್ಥಳೀಯ ಸುದ್ದಿ
ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನ ಪ್ರಥಮ ಸ್ಥಾನ ಪಡೆದ ಅಮಿತ್ ಪತ್ತಾರ್
ಧಾರವಾಡ
75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ರಾಜ್ಯಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಧಾರವಾಡದ ಅಮಿತ್ ಪತ್ತಾರ್ ಪ್ರಥಮ ಸ್ಥಾನ ಪಡೆದಿದ್ದಾರೆ
ಟ್ರೆಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಆಗಸ್ಟ್ 6 ಮತ್ತು 7ರಂದು ಎರಡನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಆಯೋಜಿಸಿದ್ದು ಅಮಿತ್ ಗು ಪತ್ತಾರ್ ಶನಿವಾರ ನಡೆದ ಟ್ರೆಡಿಷನಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ
ಅಮಿತ್ ಪತ್ತಾರ್ ಧಾರವಾಡದ
ಲೀಲಾವತಿ ಚರಂತಿಮಠ ಪಬ್ಲಿಕ ಶಾಲೆ (ಎಲಸಿಪಿಎಸ್) ಶಾಲೆಯ 7 ನೇತರಗತಿ ವಿದ್ಯಾರ್ಥಿಯಾಗಿದ್ದು 14ವರ್ಷದ ಎಲ್ಲೋ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಅಮಿತ್ ಪತ್ತಾರ್ ತಾಯಿ ಧಾರವಾಡ ಜಿಲ್ಲಾ ವಿಶ್ವಕರ್ಮ ನಿಗಮದ ನಿರ್ದೇಶಕರಾಗಿದ್ದು ಧಾರವಾಡ ನಿವಾಸಿಯಾಗಿರುತ್ತಾರೆ