ಸ್ಥಳೀಯ ಸುದ್ದಿ
ರಾಜ್ಯದ 10 ಮಂದಿ ಅಗ್ನಿಶಾಮಕದವರಿಗೆ ಕೇಂದ್ರದ ಪ್ರಶಸ್ತಿ ಪ್ರಕಟ
ಬೆಂಗಳೂರು
ಅಗ್ನಿ ಶಾಮಕ ಸೇವಾ ಸಪ್ತಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ 10 ಮಂದಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ಪ್ರಕಟ ಮಾಡಿದೆ. ಇದರಲ್ಲಿ ಹುಬ್ಬಳ್ಳಿ ನವನಗರದ ಅಮರಗೋಳದ ಅಗ್ನಿಶಾಮಕ ಠಾಣೆಯ ಉಮೇಶ ಹಿರೇಮಠ ಅವರು ಒಬ್ಬರಾಗಿದ್ದಾರೆ.
ನವನಗರದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಉಮೇಶ ಹಿರೇಮಠ ಅವರಿಗೆ ಕರ್ತವ್ಯನಿಷ್ಠೆಗೆ ಸಿಕ್ಕ ಪ್ರಶಸ್ತಿ ಇದಾಗಿದೆ.
ಸದಾ ಕರ್ತವ್ಯವೇ ದೇವರು ಎಂದು ನಂಬಿ ಅಗ್ನಿ ಅನಾಹುತಗಳಲ್ಲಿ ಮುಂದೆ ನಿಂತು ಕೆಲಸ ಮಾಡಿರುವ ಇವರ ಸಾಧನೆಗೆ ಕೇಂದ್ರ ಸರ್ಕಾರ
Award of DG-FS Disc and Commendation Certificate ಪ್ರಕಟ ಮಾಡಿದೆ.
ಸಧ್ಯ ಪ್ರಶಸ್ತಿ ಪ್ರಧಾನ ಕೆಲವೇ ದಿನಗಳಲ್ಲಿ ನಡೆಯಲಿದ್ದು, ದಿನಾಂಕ ಇನ್ನು ನಿಗದಿ ಮಾಡಿಲ್ಲಾ.
ಅಗ್ನಿಶಾಮಕದ ಸಿಬ್ಬಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲಾ ಹೆಮ್ಮೆ ಅಂತೀದಾರೆ ನವನಗರದ ಅಗ್ನಿಶಾಮಕ ಸಿಬ್ಬಂದಿಯವರು..