ಸ್ಥಳೀಯ ಸುದ್ದಿ
ಯುವಪೀಳಿಗೆ ಆಶಾಕಿರಣ ಕಿತ್ತೂರಿನ ಈ ಸಂಸ್ಥೆ
ಧಾರವಾಡ
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಚೆನ್ನಮ್ಮನ ಕಿತ್ತೂರು ಈ ಸಂಸ್ಥೆ ದೇಶ ಸೇವೆ ಮಾಡುವ ಸೈನಿಕರನ್ನು ದೇಶಕ್ಕೆ ಸಮರ್ಪಣೆ ಮಾಡುವ ಕೆಲಸ ಮಾಡುತ್ತಾ, ನಿರುದ್ಯೋಗಿ ಯುವಕ- ಯುವತಿಯರಿಗೆ ಭವಿಷ್ಯದ ಹೊಸ ಆಶಾಕಿರಣವಾಗಿದೆ.
ಇಲ್ಲಿ ಕಠಿಣ ತರಬೇತಿ ಪಡೆದ ಪರಿಣಾಮ ಕ್ಯಾಂಪನಲ್ಲಿದ್ದ ಇಬ್ಬರು ಯುವಕರು ಸಾಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಿವಾಸಿ
ಮನಿಶ ಹೊಸೂರು
ಹಾಗೂ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಶಶಿಧರ ಅಂಗಡಿ SSC (GD) ಕಾನ್ಸಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪರ್ವೇಜ್ ಹವಾಲ್ದಾರ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇಬ್ಬರು ಯುವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ