ಸ್ಥಳೀಯ ಸುದ್ದಿ

ಮಾನಕ್ಕೆ ಅಂಜಿದ್ದ ಯುವತಿಗೆ ಕರವೇ (ಬಣ) ಮಾಡಿದ್ದೇನು ಗೊತ್ತೆ?

powercity news:

ಹುಬ್ಬಳ್ಳಿ

ತಂದೆ-ತಾಯಿಯನ್ನು ಬಿಟ್ಟು ಪ್ರೀತಿಸಿದ ಯುವಕನ ಜೊತೆಗೆ ಮನೆ ಬಿಟ್ಟು ಬಂದಿದ್ದ 23 ವರ್ಷದ ಶಿರಸಿ ಮೂಲದ ಯುವತಿಯೋರ್ವಳು ಪ್ರೀತಿಸಿದವನು ಕೂಡ ಕೈ ಬಿಟ್ಟ ಬಳಿಕ ಮರಳಿ ತನ್ನೂರಿನತ್ತ ಹೋಗದೆ ಸುಮಾರು ಒಂದು ವರ್ಷಗಳಿಂದ ಹುಬ್ಬಳ್ಳಿಯಲ್ಲೇ ನೆಲಸಿದ್ದಾಳೆ.

ಆದರೆ ಇಂದು ಆಗಮಿಸಿದ್ದ ಯುವತಿಯ ತಂದೆ ತಾಯಿ ಹಾಗೂ ಸಂಭಂದಿಕರು ಆಕೆಯನ್ನ ಮರಳಿ ಮನೆಗೆ ಕರೆಯಲು ಹುಬ್ಬಳ್ಳಿಗೆ ಬಂದಿದ್ದರು. ಇ ಸಂಧರ್ಭದಲ್ಲಿ ನೊಂದ ಯುವತಿ ತನ್ನೂರು ಬಿಟ್ಟು ಬಂದ ಹಿನ್ನೆಲೆ ನಾನು ಪುನಃ ಊರಿಗೆ ಹೋದರೆ ಅವಮಾನ ಎದುರಿಸಬೆಕಾಗುತ್ತದೆ ಎನ್ನುವ ಮನೋಭಾವನೆ ಹೊಂದಿದ್ದಾಳೆ. ಆದರೆ ಯುವತಿಯ ಒತ್ತಾಸೆ ಮಾತ್ರ ತಾನೂ ಕೂಡ ಸಮಾಜದಲ್ಲಿ ದುಡಿಯಬೆಕು ತನ್ನ ತಂದೆ ತಾಯಿಯನ್ನು ಸಲುಹ ಬೇಕು. ತನ್ನ ಬದುಕು ತಾನೂ ಕಟ್ಟಿ ಕೊಳ್ಳ ಬೇಕೆಂದು ಹಂಬಲಿಸುತ್ತಿದ್ದಾಳೆ.

ಮೊದಲಿಗೆ ಯುವತಿಯ ತಂದೆ ತಾಯಿ ತಮ್ಮ ಮಗಳು ಯಾವುದೋ ಸಮಾಜಘಾತುಕ ಶಕ್ತಿಗೆ ಬಲಿಯಾಗಿದ್ದಾಳೆ ಎಂದು ಶಂಕಿಸಿದ್ದರು. ಹೀಗಾಗಿ ಅವರು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವಿಣ ಶೆಟ್ಟಿ ಬಣ)ಮಂಜುನಾಥ ಲೂತಿಮಠ ಅವರನ್ನು ಸಂಪರ್ಕಿಸಿ ಅವರ ಮುಖೇನವೆ ತಮ್ಮ ಮಗಳನ್ನ ಭೇಟಿಯಾಗಿದ್ದಾರೆ. ತಂದೆ ತಾಯಿಗಳು ಅವಳಿಗೆ ಧೈರ್ಯ ತುಂಬಿ ಮನೆಗೆ ಮರಳಿ ಬರುವಂತೆ ತಿಳಸಿದ್ದಾರೆ.ತಮ್ಮ ಮಗಳು ಯಾವುದೇ ಆಮಿಷ ಕ್ಕೊಳಗಾಗದೆ ಸೇಫ್ ಆಗಿರೊದರಿಂದ ಸಮಾಧಾನ ಗೊಂಡು ತಮ್ಮೂರ ಕಡೆ ನಡೆ ಹೊರಟ ವಾತ್ಸಲ್ಯಕರ ಘಟನೆ ಇಂದು ನಡೆದಿದೆ.

ಕೆಲವೊಂದು ಘಟನೆಗಳು ಪೊಲಿಸ್ ಠಾಣೆಯ ಮೆಟ್ಟಲೇರದೆಯೂ ಸಹ ಗುಡ್ಡ ದಂತಹ ಸಮಸ್ಯೆಗಳು ಎರಡು ಬದಿಯ ತ್ಯಾಗಮನೋಭಾವದಿಂದಲೆ ಬಗೆಹರಿದುಕೊಳ್ಳುತ್ತವೆ.

Related Articles

Leave a Reply

Your email address will not be published. Required fields are marked *