ಮಹಿಳೆಯರ ಆರ್ಥಿಕ ಪ್ರಗತಿಗೆ ಹೊಲಿಗೆ ಯಂತ್ರ ವಿತರಣೆ
ಧಾರವಾಡ
ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಧಾರವಾಡದ ಹೆಬ್ಬಳ್ಳಿ ರಸ್ತೆಯಲ್ಲಿರುವ ಅಖಿಲ ಕರ್ನಾಟಕ ಡೋರ ಕಕ್ಕಯ್ಯ ಸಮಾಜದ ತರಬೇತಿ ಪಡೆದ 210 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಸರ್ಕಾರದ ವತಿಯಿಂದ ಪ್ರತಿ ಫಲಾನುಭವಿಗೆ 6000 ರೂಪಾಯಿಗಳ ಸ್ಟೈ ಫಂಡ್ ವಿತರಣಾ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ರವರು ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರು ಮಹಿಳಾ ದಿನಾಚರಣೆಯ ಅಂಗವಾಗಿ, ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡುವ ಮೂಲಕ, ಅವರು ಯಾರ ಮೇಲೆಯೂ ಅವಲಂಬಿತವಾಗದೆ, ಸ್ವತಃ ತಾವೇ ದುಡಿಯುವ ಛಲದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಲು, ಹಾಗೂ ಒಳಮೀಸಲಾತಿಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಕರ್ನಾಟಕ ಸರಕಾರ ಹಾಗೂ ಈ ಭಾಗದ ಲೋಕಸಭಾ ಸದಸ್ಯರು, ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಷಿ ರವರಿಗೆ ಡೋರ ಸಮಾಜದ ಪರವಾಗಿ ಮಹಾಪೌರರು ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಸಂತೋಷ ಸವಣೂರ ರವರು, ಶ್ರೀ ಬಸವರಾಜ ಜಗದಾಳೆ ರವರು, ಶ್ರೀ ನರೇಶ ಕಟಕಾ ರವರು, ಶ್ರೀ ಅಶೋಕ ನಾರಾಯಣಕರ ರವರು, ಶ್ರೀ ಅನಿಲ ನಾರಾಯಣಕರ ರವರು, ಶ್ರೀ ಪಿ ಟಿ ಕದಂ ರವರು ಹಾಗೂ ಡೋರ ಕಕ್ಕಯ್ಯ ಸಮಾಜದ ಗುರುಹಿರಿಯರು ಉಪಸ್ಥಿತರಿದ್ದರು.