ಸ್ಥಳೀಯ ಸುದ್ದಿ
ಮಂಗಳಗಟ್ಟಿ ಗ್ರಾಮದಲ್ಲಿ ರೈತನ ಬಣವೆ ಸುಟ್ಟು ಕರಕಲು
ಧಾರವಾಡ
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಧರಮಣಗೌಡ ಬಸನಗೌಡ ಪಾಟೀಲ ಎನ್ನುವ ರೈತನ ಸೊಯಾಬಿನ್ ಹಾಗೂ ಮೆಕ್ಕಜೋಳದ ಬಣವೆಗೆ ಬೆಂಕಿ ಬಿದ್ದಿದೆ.
ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇವು ಸುಟ್ಟು ಹೋಗಿದ್ದು, ಏಕಾಏಕಿ ಬಣವೆಗೆ ಬೆಂಕಿ ಬಿದ್ದ ಕಾರಣ ರೈತನಿಗೆ ದಿಕ್ಕು ತೋಚದಂತೆ ಆಗಿದೆ.
ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ರು.