ಸ್ಥಳೀಯ ಸುದ್ದಿ
ಭಾವೈಕ್ಯತೆಯ ಮೊಹರಂ ಆಚರಣೆ
ಧಾರವಾಡ
ಧಾರವಾಡದ ವಾರ್ಡ ನಂ 3 ರಲ್ಲಿ ಬರುವ ಗುಲಗಂಜಿಕೊಪ್ಪ ಜನತಾಪ್ಲಾಟಿನಲ್ಲಿ ಚಿನಗಿ ದೇವರ ಮೊಹರಮ್ ಹಬ್ಬವನ್ನು ಹಿಂದು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಚಿನಗಿ ದೇವರು ಮೂಲತಃ ಮಹಾರಾಷ್ಟ್ರದ ಜತ್ತ ಜಿಲ್ಲೆಯವರಾಗಿದ್ದು, ಇವರು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಬಾದಾಮಿ ತಾಲ್ಲೂಕಿನ ಹೊಳೆಆಲೂರಿಗೆ ಬಂದು, ಅಲ್ಲಿ ಭಕ್ತರ ಕಷ್ಟಗಳನ್ನು ಪರಿಹರಿಸಿ ಅಲ್ಲಿಂದ ಧಾರವಾಡದ ಕಲ್ಯಾಣ ನಗರಕ್ಕೆ ಬಂದು ನೆಲಸಿದ್ರು.
ಅಲ್ಲಿಂದ ಧಾರವಾಡ ಗುಲಗಂಜಿಕೊಪ್ಪ ಜನತಾ ಪ್ಲಾಟಿನಲ್ಲಿ ಬಂದು ನೆಲಸಿ ಭಕ್ತರ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಚಿನಗಿ ದೇವರು.
ಇಲ್ಲಿಗೆ ದೂರದ ಊರುಗಳಿಂದ ಭಕ್ತರು ಬಂದು ಚಿನಗಿ ಅಜ್ಜನ ಆಶಿರ್ವಾದ ಪಡೆಯುತ್ತಾರೆ. ಹಿಂದು-ಮುಸ್ಲಿಂ ಅನ್ನದೆ ಭಕ್ತರು ದರ್ಶನ ಮಾಡುತ್ತಿದ್ದಾರೆ. ಈಗ ಸದ್ಯ ಅಜ್ಜನ ಅರ್ಚಕರಾಗಿ ರಾಜು ತರಗಾರವರು ಕೆಲಸಮಾಡಿಕೊಂಡು ಹೋಗುತ್ತಿದ್ದಾರೆ.