ಭಾರತದಿಂದ ಈಜಿಪ್ತ್ ದೇಶಕ್ಕೆ ಆಯ್ಕೆಯಾದ ಧಾರವಾಡದ ಯುವತಿ
ಧಾರವಾಡ
ವಿದ್ಯಾಕಾಶಿ ಧಾರವಾಡದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲಾ ಎನ್ನುವುದನ್ನು ಪೇಢಾ ನಗರಿ ಧಾರವಾಡ ಜಿಲ್ಲೆ ಮತ್ತೊಮ್ಮೆ ಸಾಬೀತು ಮಾಡಿದೆ. ಈಜಿಪ್ತ್ ದೇಶದಲ್ಲಿ ಇದೇ ಡಿಸೆಂಬರ್ 10 ರಿಂದ 21 ರಂದು ಜರುಗುವ “ಮಿಸ್ ಎಕೊಟೀನ್ ಇಂಟರ್ನ್ಯಾಷನಲ್ ಇಂಡಿಯಾ 2021 ಸ್ಪರ್ಧೆಯಲ್ಲಿ ಭಾರತವನ್ನು ಧಾರವಾಡ ಯುವತಿ ಪ್ರೆಸೆಂಟ್ ಮಾಡ್ತಾ ಇದ್ದಾಳೆ. ದೇಶದ ಆಚೆಗೆ ಧಾರವಾಡದ ಹೆಸರು ಬೆಳಗಿಸಿದ ಆ ಯುವತಿ ಯಾರು ಅಂತೀರಾ ಈ ಸ್ಪೇಶಲ್ ರಿಪೋರ್ಟ್ ನೋಡಿ ನಿಮಗೆ ಗೊತ್ತಾಗುತ್ತೆ.
ಧಾರವಾಡದ ಏಕನಾಥ ಕಾಶಿನಾಥರಾವ್ ಟಿಕಾರೆ ಹಾಗೂ ಶೈಲಾ ಟಿಕಾರೆ ಅವರ ಹಿರಿಯ ಮಗಳು ಈ ಖುಷಿ. ಇವಳಸಾಧನೆಗೆ ಇದೀಗ ಪ್ರಶಂಸೆಯ. ಸುರಿಮಳೆ ಹರಿದುಬರುತ್ತಿದೆ.
ಹೀಗಿ ಫೋಟೊ ಶೂಟ್ ಕೊಟ್ಟಿರುವ ಯುವತಿಯನ್ನ ನೋಡಿದ್ರೆ ಯಾರೋ ಉತ್ತರ ಭಾರತದವರು ಇರಬೇಕೊ ಅನ್ನಿಸುತ್ತೆ.ಖಂಡಿತಾ ಇಲ್ಲಾ ಸ್ವಾಮಿಇವರು ನಮ್ಮ ಧಾರವಾಡದ ಮಗಳು ಖುಷಿ ಟಿಕಾರೆ ಅಂತಾ. ಧಾರವಾಡದ ಮಿಶನ ಕಂಪೌಂಡ್ ನಿವಾಸಿಯಾಗಿರುವ ಖುಷಿ ಜೆಎಸ್ ಎಸ್ ಕಾಲೇಜಿನಲ್ಲಿ ಪಿಯುಸಿ ಸೈನ್ಸ ವಿಭಾಗದಲ್ಲಿ ಓದುತ್ತಿದ್ದಾಳೆ. ಇವಳ ಸಾಧನೆ ಇದೀಗ ಧಾರವಾಡ ಜಿಲ್ಲೆಯ ತುಂಬೆಲ್ಲಾ ಹೆಸರು ಮಾಡುತ್ತಿದೆ. ಸ್ವತಂ ವಿರೇಂದ್ರ ಹೆಗ್ಗಡೆ ಅವರು ಇವಳಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ಖುಷಿ ಟಿಕಾರೆ ಇವಳು ಬ್ಯೂಟಿಕಂಟೆಸ್ಟ್ ನಲ್ಲಿ ಟಿನೇಜ್ ವಿಭಾಗದಲ್ಲಿ ಭಾರತದಿಂದ ಒಬ್ಬಳೆ ಸೆಲೆಕ್ಟ್ ಆಗಿದ್ದಾಳೆ. ಮಿಸ್ ಇಕೋಟಿನ್ ಇಂಟರನ್ಯಾಶನಲ್ 2021 ಈಜಿಪ್ತ ದೇಶದಲ್ಲಿ ನಡೆಯುತ್ತಿದೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಬ್ಯೂಟಿ ಕಂಟೆಸ್ಟನಲ್ಲಿ 50 ಸ್ಫರ್ದಾಳುಗಳ ನಡುವೆ ಖುಷಿ ಟಿಕಾರೆ ಆಯ್ಕೆಯಾಗಿದ್ದಾಳೆ. ಇದೊಂದು ನನ್ನ ಪಾಲಿಗೆ ಸಂತೋಷದ ವಿಷಯ ಅಂತಾರೆ ಖುಷಿ.
ಬೆಂಗಳೂರು ಮೂಲದ ಆರ್ಕಿಡ್ ಇವೆಂಟ್ಸ ಇಂಟರನ್ಯಾಶನಲ್ ತಕ್ಷಣ ರಾಮ್ ಅವರು ಸ್ಥಾಪನೆ ಮಾಡಿದ್ದು, ಮುಖ್ಯವಾಗಿ ದಕ್ಷಿಣ ಭಾರತದ ಯುವತಿಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಬ್ಯೂಟಿ ಕಾಂಫಿಟೇಶನ್ ನಲ್ಲಿ ಆಯ್ಕೆಯಾದ ಜಗತ್ತಿನಲ್ಲಿರುವ ಎಲ್ಲಾ ಟಿನೇಜ್ ಯುವತಿಯರನ್ನು ಒಂದೇಡೆ ಸೇರಿಸಿ
ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಫೋಟೊ ಶೂಟ್ ಮಾಡಿಸಲಾಗುತ್ತೆ. ಇದು ಆರ್ಕಿಡ ಇವೆಂಟ್ಸ ಇಂಟರನ್ಯಾಶನಲ್ ಸಂಸ್ಥೆಯ ಮೊದಲ ಉದ್ದೇಶ. ಮಗಳ ಸಾಧನೆಗೆ ತಾಯಿ ತುಂಬಾನೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಖುಷಿ ಅಜ್ಜನ ಆಸೆಯೂ ಇದೇ ಆಗಿತ್ತು.ಮೊಮ್ಮಗಳು ದೇಶವೇ ಹೆಮ್ಮೆಯ ಪಡುವಂತಹ ಸಾಧನೆ ಮಾಡಲಿ ಎನ್ನುವುದು.
ಈಜಿಪ್ತ ದೇಶದ ಲಕ್ಸರ್ ಪಟ್ಟಣದಲ್ಲಿ ಖುಷಿ ತನ್ನ ಬ್ಯೂಟಿ ಕಮಾಲ್ ಮಾಡಲು ತಯಾರಿ ನಡೆಸಿದ್ದು, ಡಿಸೆಂಬರ್ 7 ಕ್ಕೆ ಧಾರವಾಡದಿಂದ ಪ್ರಯಾಣ ಬೆಳೆಸಲಿದ್ದಾಳೆ. ಇವಳು ಸಾಧನೆ ಭಾರತದ ಕೀರ್ತಿಯನ್ನು ಬೆಳಗುವಂತೆ ಮಾಡಲಿ ಎನ್ನುವುದು ನಮ್ಮ ಆಶಯ..