ಬೇಂದ್ರೆ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡ: ಹೂಗಾರ
ಧಾರವಾಡ
ನವಲೂರಿನ ಬ್ರಿಡ್ಜ್ ಬಳಿ ಇರುವ ಉದಯಗಿರಿ ವೃತ್ತದ ಮೂಲಕ ಮನೆಯತ್ತ ತೆರಳುತ್ತಿದ್ದ ಬೈಕ್ ಒಂದಕ್ಕೆ ನಗರದ ಬೇಂದ್ರೆ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಬಸ್ಸಿನ ಕೆಳಗೆ ಸಿಲುಕಿ ಕೊಂಡಿದ್ದಾನೆ.
ಇದರಿಂದ ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರಾಣ ಕಾಪಾಡಿದ ಹೆಲ್ಮೇಟ್
ವೃತ್ತಿಯಲ್ಲಿ ಕಿರಾಣಿ ಅಂಗಡಿ ವ್ಯಾಪಾರಸ್ಥ ರಾಗಿರುವ ಸತ್ತೂರು ಆಶ್ರಯ ಕಾಲೂನಿಯ ನಿವಾಸಿ ಈರಣ್ಣ ಹೂಗಾರ ಇಂದು ಬೆಳಿಗ್ಗೆ ಎಂದಿನಂತೆ ಕಿರಾಣಿ ಸಾಮಗ್ರಿ ತರಲು ನವಲೂರಿನ ಬ್ರಿಡ್ಜ್ ಉದಯಗಿರಿ ಸರ್ಕಲ್ ಬಳಿ ಬೈಕಿನಲ್ಲಿ ತೆರಳುತ್ತಿದ್ದರು.ಇದೆ ವೇಳೆ ವೇಗವಾಗಿ ಬಂದ ಬೇಂದ್ರೆ ನಗರ ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದಿದೆ.
ಬಸ್ಸಿನ ಡಿಕ್ಕಿಯ ರಭಸಕ್ಕೆ ಬೈಕ್ ಮೆಲೆ ಬಸ್ ಎರಿ ನಿಂತಿದೆ.ಬಸ್ಸಿನ ಬುಡದಲ್ಲಿ ಸಿಲುಕಿದ್ದ ಈರಣ್ಣ ಹೆಲ್ಮೇಟ್ ಧರಿಸಿದ್ದರು. ಆದರೆ ರಸ್ತೆಯ ಮೇಲೆ ಬಿದ್ದ ಪರಿಣಾಮ ಮುಖಕ್ಕೆ ಮತ್ತು ಕೈ- ಕಾಲುಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ.
ನಂತರ ಕೆಳಗೆ ಬಿದ್ದ ಬೈಕ್ ಸವಾರನನ್ನು ಸ್ಥಳೀಯರು ಅಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಲ್ಮೇಟ್ ಧರಿಸಿದ್ದರಿಂದ ಈರಣ್ಣ ನ ತಲೆಗೆ ಆಗಬಹುದಾದ ತೊಂದರೆಯಿಂದ ಪಾರಾಗಿದ್ದಾರೆ.
ಇನ್ನೂ ಅಪಘಾತ ಪಡಿಸಿ ಸ್ಥಳದಿಂದ ಕಾಲ್ಕಿತ್ತಿದ್ದ ಬೇಂದ್ರೆ ಬಸ್ ಚಾಲಕನನ್ನು ವಶಕ್ಕೆ ಪಡೆದಿರುವ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಭೆಟಿನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.