ಬಿಜೆಪಿ ಶಾಸಕ ಅಮೃತ ದೇಸಾಯಿ ವಿರುದ್ದ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ವಾಗ್ದಾಳಿ
ಧಾರವಾಡ
ಧಾರವಾಡ ಗ್ರಾಮೀಣ ಬಿಜೆಪಿ ಶಾಸಕ ಅಮೃತ ದೇಸಾಯಿ ಅನಗತ್ಯವಾಗಿ ಸಮಾಜದ ಶಾಂತಿ, ಸೌಹಾರ್ದತೆಗೆ ಪದೇ ಪದೇ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಘಟನೆಯಲ್ಲಿ 160ಕ್ಕೂ ಹೆಚ್ಚು ಅಮಾಯಕರ ಬಂಧನದ ಪರ ಮಾತನಾಡಿದರೆ ಶಾಂತಿ ಕದಡುವ ಕೆಲಸವಾಗುವುದಿಲ್ಲ. ಬದಲಿಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅಂತಹವರನ್ನು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕರೆ ತಂದು ಅವರ ಮೂಲಕ ಇನ್ನೊಬ್ಬರ ಬಗ್ಗೆ ಅವಾಚ್ಯ ಶಬ್ದಗಳ ಪದ ಪ್ರಯೋಗ, ಹೀಯಾಳಿಸುವ ಕೆಲಸ ಮಾಡಿದರೆ ಖಂಡಿತ ಶಾಂತಿ ಕದಡುತ್ತದೆ ಎಂಬುದನ್ನು ಮರೆಯಬಾರದು ತಿರುಗೇಟು ನೀಡಿದ್ದಾರೆ.
ಅಮಾಯಕರ ಬಿಡುಗಡೆ ಮಾಡಿಸುವುದು ಸಮಾಜದ ಜವಾಬ್ದಾರಿ.
ಶಾಸಕರು ಜನರ ಪರವಾಗಿ ಇರಬೇಕು ಹೊರತು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕುಟುಕಿದರು.ಶಾಸಕರು ಮೊದಲು ಹಳ್ಳಿಗಳಲ್ಲಿ ಸಂಚರಿಸಿ ಬಡ ರೈತರ ಸಮಸ್ಯೆ ಬಗೆ ಹರಿಸಲಿ, ನಂತರ ಬೇಡದ ವಿಚಾರಗಳಲ್ಲಿ ಆಸಕ್ತಿ ತೋರಲಿ.
ಕಳೆದ 10 ವರ್ಷಗಳ ಆಡಳಿತ ನೋಡಿದ ನಮ್ಮ ಧಾರವಾಡ ಗ್ರಾಮೀಣ ಮತದಾರರು ಮೌನವಾಗಿದ್ದಾರೆ ಈ ಬಾರಿ ಹೊಸ ಮುಖವನ್ನು ಶಾಸಕರಾಗಿ ಆಯ್ಕೆ ಮಾಡಿ ದೇಸಾಯಿ ಮನೆಗೆ ಕಳುಹಿಸಲಿದ್ದಾರೆ.
ನಾನು ಹಳೆ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಅಮಾಯಕರ ಪರ ಹೋರಾಟ ನಡೆಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸ್ಪಷ್ಟ ಪಡಿಸಿದ್ದಾರೆ.