ಬಿಂದಾಸ್ ಆಗಿ ರಸ್ತೆಗೆ ಕಸ ಚೆಲ್ಲುತ್ತಿದ್ದವರಿಗೆ ಭರ್ಜರಿ ಪಾಠ ಹೇಳಿದ ಪಾಲಿಕೆ ಮಾಡಿದ್ದೇನು ಗೊತ್ತೆ..!
ಹುಬ್ಬಳ್ಳಿ:ಸ್ವಚ್ಛ ನಗರಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾರ್ಮಿಕರ ಶ್ರಮ ಹಾಗೂ.ಇದೆ ನಿಟ್ಟಿನಲ್ಲಿ ಅದೆಷ್ಟೋ ಪ್ರಯೋಗಗಳನ್ನು ಕೂಡ ಪಾಲಿಕೆ ಮಾಡುತ್ತಿದೆ. ಆದರೆ ಸಾರ್ವಜನಿಕರು ಹಾಗೂ ಅಂಗಡಿಕಾರರು ಬಿಂದಾಸ್ ಕಸ ಚೆಲ್ಲುವ ಮೂಲಕ ಪಾಲಿಕೆಯ ಸ್ವಚ್ಛಂದ ನಗರದ ಕನಸಿಗೆ ತಣ್ಣೀರರೆಚುವ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರುವ ಅಂಗಡಿಗಳ ಮಾಲಿಕರಿಗೆ ಪಾಲಿಕೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಹೌದು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 47ರ ವ್ಯಾಪ್ತಿಯಲ್ಲಿನ ಪಾನ್ ಶಾಪ್ ಅಂಗಡಿಯವರು ರಸ್ತೆಬದಿಯಲ್ಲಿ ಕಸ ಚೆಲ್ಲುವ ಮೂಲಕ ಅವ್ಯವಸ್ಥೆ ಹುಟ್ಟು ಹಾಕಿದ್ದರು. ಅವ್ಯವಸ್ಥೆ ಅರಿತ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಸವನ್ನು ಅಂಗಡಿ ಮಾಲಕರಿಂದಲೇ ಸ್ವಚ್ಚಗೊಳಿಸುವ ಮೂಲಕ ಮತ್ತೆ ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಅಧಿಕಾರಿಗಳು ಈಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನಾದರೂ ಜನರು ಎಚ್ಚೇತ್ತುಕೊಂಡು ತಮ್ಮ ಮನೆಯಂತೆ ಸಾರ್ವಜನಿಕ ಸ್ಥಳಗಳ ಬಗ್ಗೆ ಕಾಳಜಿ ವಹಿಸಬೇಕಿದೆ.