ಬೆಂಗಳೂರುರಾಜಕೀಯರಾಜ್ಯಸ್ಥಳೀಯ ಸುದ್ದಿ

ಬಿ ಆರ್ ಯಾವಗಲ್ ವಿರುದ್ಧ ಲೊಕಾಯುಕ್ತದಲ್ಲಿ ದೂರು ದಾಖಲು!

powercity news :ಗದಗ/ನರಗುಂದ-

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ದಿ.ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿಯಲ್ಲಿ ಆರ್ಥಿಕ ಅಪರಾಧ ಜರುಗಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಬಿ.ಆರ್. ಯಾವಗಲ್ ಅಧ್ಯಕ್ಷರಾಗಿರುವ ಸದರಿ ಸಹಕಾರಿ ಸಂಸ್ಥೆಯು, ಸಂಪೂರ್ಣ ದೀವಾಳಿಯಾಗಿದ್ದು ಸದರಿ ಮರಣಶೈಯ್ಯೆಯಲ್ಲಿ ನಲುಗುತ್ತಿದೆ.
ಎಣ್ಣೆ ಉತ್ಪನ್ನ ಉತ್ಪಾದನೆಯ ನೆಪದಲ್ಲಿ ರೈತರ ನೆರವು ಪಡೆದು ಸಹಕಾರಿ ತತ್ವದಲ್ಲಿ ಸ್ಥಾಪನೆಯಾಗಿದ್ದ ದಿ.ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿಯು ಅದರ ಆಡಳಿತ ಮಂಡಳಿಯ ಬೇಜವಾಬ್ದಾರಿಯ ಕಾರಣಕ್ಕೆ ಇಸವಿ 2008 ರಲ್ಲಿಯೇ ದೀವಾಳಿಯಾಗಿ ಬಂದ್ ಆಗಿತ್ತು.

ಪಾಳು ಬಿದ್ದ ಆಯಿಲ್ ಮಿಲ್!

ಅರಂಭಿಕ ದಿನಗಳಿಂದಲೂ ಮಾಜಿ ಶಾಸಕ ಬಿ.ಆರ್.ಯಾವಗಲ್ ಕೈಗೊಂಬೆಯಾಗಿದ್ದ ದಿ.ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿಯು, ಉತ್ಪಾದನಾ ವ್ಯವಸ್ಥೆಯತ್ತ ಚಿತ್ತ ನೆಡದೇ ಅನಗತ್ಯ ಸಾಲ ಮಾಡುವ ಶೋಕಿಗೆ ಬಲಿಯಾಗಿತ್ತು ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಬಿ.ಆರ್.ಯಾವಗಲ್ ಸ್ವಜನ ಪಕ್ಷಪಾತದ ಕಾರಣಕ್ಕೆ ಸಂಸ್ಥೆಯು ಅನಗತ್ಯ ಸಾಲದ ಶೂಲಕ್ಕೆ ತುತ್ತಾಗಿ ಬಡ್ಡಿಯ ಹೊರೆಯನ್ನು ಹೊತ್ತುಕೊಂಡು ಮಕಾಡೆ ಮಲಗಿತ್ತು.ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಧಾರವಾಡದ ಕೆ.ಸಿ.ಸಿ ಬ್ಯಾಂಕಿನಲ್ಲಿ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇಸವಿ 2008 ರಲ್ಲಿಯೇ ದೀವಾಳಿಯಾಗಿ ಬಂದ್ ಆಗಿತ್ತು.

ಸಾಲದ ಮರುಪಾವತಿಗಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಧಾರವಾಡ ಕೆ.ಸಿ.ಸಿ ಬ್ಯಾಂಕ್ ಅದೆಷ್ಟೋ ಬಾರಿ ನೋಟಿಸು ಕಳಿಸಿದ್ದರೂ ಕೂಡ ಅದರತ್ತ ಗಮನ ಹರಿಸದ ಕಾರಣಕ್ಕೆ, ಸಹಕಾರಿ ಎಣ್ಣೆ ಗಿರಣಿಯ ಆಸ್ತಿಯನ್ನು ಸಹಕಾರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ 2013 ರಲ್ಲಿ ಮತ್ತೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ಬಿ.ಆರ್.ಯಾವಗಲ್, ತಮ್ಮ ರಾಜಕೀಯ ಪ್ರಭಾವ ಬಳಸಿ ರಾಜ್ಯ ಸರ್ಕಾರದ ಮುಂದೆ ವಿಶೇಷ ಅನುದಾನದ ಬೇಡಿಕೆ ಇಡುತ್ತಾರೆ.

ಖಾಸಗಿ ಕಾರ್ಯಕ್ರಮಕ್ಕೆ ಎಂದಿನಂತೆ ಬಳಕೆ!

ಕಾನೂನಿನಲ್ಲಿ ಇದಕ್ಕೆ ಅವಕಾಶಗಳು ಕಡಿಮೆ ಇದ್ದಾಗಲೂ ಕೂಡ ಇದೊಂದು ವಿಶೇಷ ಪ್ರಕರಣವೆಂದು ಮಾನ್ಯ ಮಾಡಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ತಮ್ಮ ಸುಪರ್ದಿಯಲ್ಲಿದ್ದ ಹಣಕಾಸು ಇಲಾಖೆಯಿ.ದ ಸುಮಾರು 8.00 ಕೋಟಿ ಅನುದಾನ ಬಿಡುಗಡೆಗೆ ಅನುಮೋದಿಸುತ್ತಾರೆ. ಹೀಗೆ ಸಂಸ್ಥೆಯ ಹೆಸರಿಗೆ ಬಂದ ‘ವಿಶೇಷ ಆರ್ಥಿಕ ನೆರವು’ ಅಡಿಯಲ್ಲಿ ಬಂದ ಹಣವನ್ನು, ಸಂಸ್ಥೆ ವತಿಯಿಂದ ಆಡಳಿತ ಮಂಡಳಿ ಅವೈಜ್ಞಾನಿಕವಾಗಿ ಮಾಡಿದ್ದ ಸಾಲದ ಮರುಪಾವತಿಗೆ ಬಳಸಿಕೊಳ್ಳಲಾಗಿರುತ್ತದೆ.

ಈ ಕುರಿತು ಬಳ್ಳಾರಿ ಜಿಲ್ಲೆ ಮೂಲದ ಸಾಮಾಜಿಕ ಹೋರಾಟಗಾರ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಮಂಜುನಾಥ, ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿ ಮಾಜಿ ಶಾಸಕ ಬಿ.ಆರ್.ಯಾವಗಲ್ ಮೇಲೆ ಅಧಿಕಾರ ದುರ್ಬಳಕೆ ಪ್ರಕರಣ ದಾಖಲಿಸಿ, ದಿ.ಮಲಪ್ರಭಾ ಸಹಕಾರಿ ಎಣ್ಣಿ ಗಿರಣಿಯಲ್ಲಿ ಜರುಗಿರುವ ಅಷ್ಟೂ ಅವ್ಯವಹಾರವನ್ನು ತನಿಖೆಗೆ ಒಳಪಡಿಸಲು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *