ಸ್ಥಳೀಯ ಸುದ್ದಿ
ಬಸ್ಸಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ
ಧಾರವಾಡ
ಧಾರವಾಡ ತಾಲೂಕಿನ ತಡಕೋಡ ಗ್ರಾಮಸ್ಥರು ಬಸ್ಸಿಗಾಗಿ ಪ್ರತಿಭಟನೆ ನಡೆಸಿ, ಟೈರಗೆ ಬೆಂಕಿ ಹಚ್ಚಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಡಕೋಡ ಗ್ರಾಮದ ನೂರಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಧಾರವಾಡಕ್ಕೆ ಬರುತ್ತಿದ್ದು, ಬೈಲಹೊಂಗಲದ ಬಸಗಳಿಂದ ವಿದ್ಯಾರ್ಥಿಗಳು ಧಾರವಾಡಕ್ಕೆ ಹೋಗಲು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲಾ. ಹೀಗಾಗಿ ಪ್ರತ್ಯೇಕವಾಗಿ ತಡಕೋಡ ಗ್ರಾಮಕ್ಕೆ ವಿದ್ಯಾರ್ಥಿಗಳಿಗಾಗಿಯೇ ಬಸ್ ಬಿಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ರು.
ಈ ಸಂದರ್ಭದಲ್ಲಿ
ಕಾಂಗ್ರೇಸ ಮುಖಂಡರಾದ ಸಂಪತ್ತ ಹಂದೂರ,
ಕಾರ್ತಿಕ ಗೋಕಾಕ, ಮಡವಾಳ್ಳಪ್ಪ ಮಡಗೊಡ್ಲಿ, ಕಲ್ಲಪ್ಪ ಹಜೇರೀ
,ಶಂಕರ ಸುಂಕದ,
ವಿನಾಯಕ ಜಿಟ್ಟಿ,
ಚನ್ನಪ್ಪ ಗಾಣೀಗೆರ ಸಣ್ಣವೀರಗೌಡ ಪಾಟೀಲ, ನಾಗು ಪಾಟೀಲ್ ಸೇರಿದಂತೆ ಗ್ರಾಮಸ್ಥರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.