ಪೋಲಿಸರ ಕೈಗೆ ಸಿಗದೆ 10ವರ್ಷಗಳಿಂದ ಆಟ ಆಡಿಸಿದ್ದವನನ್ನು ಸೆರೆಮನಿಗಟ್ಟಿದ : ಕಾಲಿಮಿರ್ಚಿ!
Power city news ಹುಬ್ಬಳ್ಳಿ : ಮನೆಗಳ್ಳತನ, ದರೋಡೆ, ಸುಲಿಗೆ, ಹಂದಿ ಕಳ್ಳತನ ಇತ್ಯಾದಿ 13 ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಹುಬ್ಬಳ್ಳಿಯ ಗೋಕುಲ ರಸ್ತೆ, ಗದಗ ಜಿಲ್ಲೆಯ ರೋಣ, ಬೆಳಗಾವಿಯ ಸಂಕೇಶ್ವರ, ಗೋಕಾಕ, ಹುಕ್ಕೇರಿ, ಅಂಕಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಒಟ್ಟೂ 13 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿ ರಾಜು ಗಂಗಪ್ಪ ಕಾಮಜೇನಿ ಇವನನ್ನು 2022ರ ಅಪರಾಧ ತಡೆ ಮಾಸಾಚರಣೆಯ ನಿಮಿತ್ತ ಗೋಕುಲ ಪೊಲೀಸ್ ಠಾಣೆಯ ಪಿಐ ಜೆ.ಎಂ.ಕಾಲಮಿರ್ಚಿ ಹಾಗೂ ಪಿಎಸೈ ದೇವೇಂದ್ರ ಮಾವಿನಂಡಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ರಾಜು ತಿಗಣಿ, ಮಹೇಶ ಬೆನ್ನೂರ ಪತ್ತೆ ಕಾರ್ಯ ನಡೆಸಿ, ಆರೋಪಿ ರಾಜು ಚಿಕ್ಕಮಗಳೂರು ಸುತ್ತಮುತ್ತ ಪ್ರದೇಶದಲ್ಲಿ ವಾಸವಾಗಿದ್ದಾನೆಂಬ ಮಾಹಿತಿಯನ್ನು ಸಂಗ್ರಹಿಸಿದ್ದರು.
ನಾಲ್ಕು ದಿನಗಳ ಕಾಲ ವೇಷ ಮರೆಸಿಕೊಂಡು ಅಲ್ಲಿಯೇ ಹುಡುಕಾಡಿ, ಇದೀಗ ರಾಜು ಗಂಗಪ್ಪ ಕಾಮಜೇನಿಯನ್ನು ಪತ್ತೆಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.