ಪೂರ್ವ ಮತಕ್ಷೇತ್ರಕ್ಕೆ : ಬಿಜವಾಡ!
ಹುಬ್ಬಳ್ಳಿ
ಚುನಾವಣಾ ರಣರಂಗದಲ್ಲಿ ಮತ್ತೆ ಜನರ ಮಧ್ಯೆ ಕಾಣಿಸಿಕೊಂಡ ಮಾಜಿ ಪಾಲಿಕೆ ಸದಸ್ಯ ದುರ್ಗಪ್ಪ ಬಿಜವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಕಾಂಗ್ರೇಸ್ಸಿನ ಭದ್ರಕೋಟೆಯಾಗಿ ಹೊರ ಹೊಮ್ಮಿರುವ ಪೂರ್ವ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾವೋಬ್ಬ ಆಕಾಂಕ್ಷಿಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ಮತ್ತೊಮ್ಮೆ 2023ರ ಚುನಾವಣೆ ಎದುರಸಿಲಿದ್ದಾರೆ. ಇನ್ನೂ ಕಳೆದ ಒಂದು ದಶಕದಿಂದಲೂ ಸಕ್ರಿಯ ರಾಜಕಾರಣದಿಂದ ದೂರವೆ ಉಳಿದಿದ್ದ ಮಾಜಿ ಪಾಲಿಕೆ ಸದಸ್ಯ ದುರ್ಗಪ್ಪ ಬಿಜವಾಡ ಈಗ ಮತ್ತೋಮ್ಮೆ ಎ ಐ ಎಮ್ ಐಎಮ್ ಪಕ್ಷದಿಂದ ಚುನಾವಣಾ ರಣಕಣದಲ್ಲಿ ಉಳಿದಿದ್ದರಿಂದ ಇನ್ನುಳಿದ ಅಭ್ಯರ್ಥಿಗಳಿಗೆ ಮತ್ತಷ್ಟು ತಲೆನೋವಾಗಿದೆ.
ಇದುವರೆಗೂ ದುರ್ಗಪ್ಪ ಬಿಜವಾಡ ಬಳಿ ಬರುತ್ತಿದ್ದ ಎಲ್ಲ ಪಕ್ಷದ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ ಎ ಐ ಎಮ್ ಐ ಎಮ್ ಪಕ್ಷದ ಮೂವರು ಪಾಲಿಕೆ ಚುನಾವಣೆಯಲ್ಲಿ ಗೆಲುವು ಕಂಡಿದ್ದರಿಂದ ಮುಂಬರುವ ಚುಣಾವಣೆಗೆ ಅಸಾದುದ್ದಿನ ನೇತೃತ್ವದ ಐ ಎಮ್ ಐ ಎಮ್ ಪಕ್ಷಕ್ಕೆ ಗೆ ಬಲ ಸಿಕ್ಕಂತಾಗಿದೆ.