ಪಂಜಾಬ್ ನಲ್ಲಿ AAP ಪಕ್ಷದ ಮಹತ್ವದ ನಿರ್ಧಾರ
ಪಂಜಾಬ್
ದೆಹಲಿ ರಾಜ್ಯದ ಬಳಿಕ ಪಂಜಾಬ್ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಾರ್ಟಿ ಮಹತ್ವದ ನಿರ್ಧಾರವೊಂದು ಪ್ರಕಟಿಸಿದೆ.
ಪಂಜಾಬ್ ರಾಜ್ಯದಲ್ಲಿ ಸಿಎಂ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ರಾಜಕೀಯ ನೇತಾರ ಫೋಟೊಗಳನ್ನು ಹಾಕದೇ ಇರಲು ತೀರ್ಮಾನಿಸಲಾಗಿದೆ.
ಬದಲಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಅವರ ಫೋಟೊಗಳನ್ನು ಹಾಕಲಾಗುತ್ತಿದೆ.
ಬಗ್ಗೆ ಆಪ್ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಸ್ವಂತ ಘೋಷಣೆ ಮಾಡಿದ್ದಾರೆ.
ಅಲ್ಲದೇ ಹೊಸ ಸಿಎಂ ಭಗವಂತ್ ಸಿಂಗ್ ಮಾನ್ ಸಚಿವರು, ಶಾಸಕರು ಹಳ್ಳಿಗಳಿಗೆ ಹೋಗಿ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಎಂದು ಅಧಿಕಾರಕ್ಕೆ ಪಕ್ಷದ ಶಾಸಕರುಗಳಿಗೆ ಹೇಳಿದ್ದಾರೆ.
ಈಗಾಗಲೇ ಮಾಜಿ ಸಚಿವರಿಗೆ ಹಾಗೂ ಶಾಸಕರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯುವುದಾಗಿ ಆಪ್ ಪಕ್ಷದ ಸಿಎಂ ಹೇಳಿದ್ದಾರೆ.
ಒಟ್ಟಾರೆಯಾಗಿ ಆಪ್ ಪಕ್ಷ ಎಲ್ಲರಿಗಿಂತ ಭಿನ್ನವಾಗಿದೆ ಎಂದು ಅರವಿಂದ ಕೇಜ್ರಿವಾಲ್ ಟೀಂ ಪಂಜಾಬಿನಲ್ಲಿ ನುಡಿದಂತೆ ನಡೆದುಕೊಳ್ಳಲು ಮುಂದಾಗಿರುವುದು ಪಂಜಾಬಿನ ಜನರಲ್ಲಿ ಹೊಸ ಬದಲಾವಣೆ ಗಾಳಿ ಬೀಸಿದಂತೆ ಆಗಿದೆ.