ನಯಾನಗರದ ಕಾರ್ತಿಕೋತ್ಸವದಲ್ಲಿ ಪವರ್ ಸಿಟಿ ನ್ಯೂಸ್ ಕನ್ನಡ ಟೀಂ ಭಾಗಿ
ಬೆಳಗಾವಿ
ಕಾರ್ತಿಕೋತ್ಸವದ ಕೊನೆಯ ದಿನ ಅಮವಾಸ್ಯೆಯಂದು ಸಾವಿರಾರು ಮಂದಿ ಭಕ್ತರು ಸೇರಿ ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ತೋರಿದ್ರು.
ದೂರದ ಊರುಗಳಿಂದ ಶ್ರೀಗಳ ಪವಾಡ ಅರಿತಿರುವ ಸಾವಿರಾರು ಭಕ್ತಾದಿಗಳು ಕುಟುಂಬ ಸಮೇತವಾಗಿ ಬಂದು ದೀಪ ಬೆಳಗಿಸಿ ಸಂಭ್ರಮಿಸಿದ್ರು.
ಇದೇ ವೇಳೆ ಕೆವಲ 1 ತಿಂಗಳ ಹಿಂದೆಯಷ್ಟೇ ತಾವೇ ಉದ್ಘಾಟಿಸಿದ್ದ ಪವರ್ ಸಿಟಿನ್ಯೂಸ್ ಕನ್ನಡದ ಜೋತೆಗೆ ಮಾತನಾಡಿದ ಶ್ರೀಗಳು, ಇಂದಿನ ದಿನಗಳಲ್ಲಿ
ಧರ್ಮ ಉಳಿಯಬೇಕಾಗಿದೆ.
ನಯಾನಗರದಲ್ಲಿ ಸಂಸ್ಕೃತಿ ಇದೆ. ಕೊರೊನಾ ಹೋಗಲಿ ಈ ನಾಡಿಗೆ, ಈ ಸಮಾಜಿಗೆ ಗುರುದೇವ ಸುಖದೇವಾದ ಸಮಸ್ತ ಒಳಿತನ್ನು ಮಾಡಲಿ ಎಂದು ನಯಾನಗರ ಸುಕ್ಷೇತ್ರದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದ್ರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಧಾರವಾಡದ ಹೊಸಯಲ್ಲಾಪೂರದ ಭಕ್ತರಾದ ಸಂಜೀವ ಲಕಮನಹಳ್ಳಿ ಹಾಗೂ ಸಾಲಿಗೌಡರ್ ಅವರು ಶ್ರೀಗಳ ಪವಾಡ ಬಹಳ ದೊಡ್ಡದ್ದು, ನಾವು ಮಠಕ್ಕೆ ಬಂದಿರುವ ಜನರನ್ನು ನೋಡಿ ಖುಷಿ ಪಟ್ಟೆವು. ಪ್ರತಿ ಅಮವಾಸ್ಯೆಗೆ ನಾವು ಇಲ್ಲಿ ಬಂದು ಗದ್ದುಗೆ ಆರ್ಶಿವಾದ ತೆಗೆದುಕೊಂಡು ಹೋಗ್ತೇವಿ ಎಂದರು..