ಧೀರಜ್ ಸಮ್ಮರ ಕ್ಯಾಂಪ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಗಜೇಂದ್ರಗಡ:: ಡಾ.ಬಿ.ಆರ್.ಅಂಬೇಡ್ಕರ್ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗಿ ಬದುಕ ಬಹುದಿತ್ತು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದರೂ ತಮ್ಮ ದೇಶದಲ್ಲಿನ ಶೋಷಿತ ವರ್ಗದವರ ಬಗ್ಗೆ ಯೋಚಿಸಿದರು. ಶಿಕ್ಷಣ, ಸಂಘಟನೆ ಜೊತೆ ಸಂಘರ್ಷದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಲು ಕರೆ ನೀಡಿದರು. ಶೋಷಿತ ವರ್ಗದ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದ ಮಹಾನ್ ನಾಯಕರಾಗಿದ್ದರು ಎಂದು ಧೀರಜ್ ಕೋಚಿಂಗ್ ಕ್ಲಾಸ್ ಶಿಕ್ಷಕಿ ನಾಜೀಯಾ ಮುದಗಲ್ ಹೇಳಿದರು.
ನಗರದ ಲಿಂಗರಾಜ ನಗರದಲ್ಲಿನ ಧೀರಜ್ ಸಮ್ಮರ ಕ್ಯಾಂಪ್ ಹಾಗೂ ಕೋಚಿಂಗ್ ಕ್ಲಾಸ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.ಅಂಬೇಡ್ಕರ್ ಈ ದೇಶದಲ್ಲಿ ಸಮಾನತೆ, ಏಕತೆ ಯೊಂದಿಗೆ ಅಖಂಡ ಭಾರತದ ವಿವಿಧ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಜೊತೆಗೆ ಅವರ ಆದರ್ಶಗಳನ್ನು ಪಾಲಿಸುವುದು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಬಳಿಕ ಸಂಸ್ಥೆಯ ಶಿಕ್ಷಕ ಮುದರಸ ಕಂದಗಲ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬದುಕನ್ನು ಮುಡಿಪಾಗಿಟ್ಟ ಮಹಾನ್ ಸಮಾಜ ಸುಧಾರಕರಾಗಿದ್ದರು ಹಾಗೂ ಅವರ ಮಾರ್ಗದರ್ಶನವನ್ನು ವಿಧ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಸೀತಲ ಓಲೇಕಾರ, ಶಿಕ್ಷಕಿಯರಾದ ನಾಜೀಯಾ ಮುದಗಲ್, ವಿಜಯಲಕ್ಷ್ಮಿ , ಚೈತ್ರಾ ಗಾಯಕವಾಡ, ಮುದರಸ ಕಂದಗಲ, ಅಕ್ಷತಾ ಓಲೇಕಾರ ಮಾರುತಿ ಕರಾಡೆ ಸೇರಿದಂತೆ ಮುದ್ದು ವಿದ್ಯಾರ್ಥಿಗಳು ಇದ್ದರು.