ಧಾರವಾಡದಲ್ಲಿ ಕೆಂಪು ಮಣ್ಣು ಅಕ್ರಮ ಮಾರಾಟ
ಧಾರವಾಡ
ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರ ತವರು ಜಿಲ್ಲೆ ಧಾರವಾಡ.
ಇಂತಹ ಧಾರವಾಡ ಜಿಲ್ಲೆಯಲ್ಲಿ ಮರಮ್ ಎಂದ್ರೆ ( ಕೆಂಪು ಮಣ್ಣು ) ಅಕ್ರಮ ಸಾಗಾಟ ಜೋರಾಗಿ ನಡೆದಿದೆ.
ಸರ್ಕಾರ ಭೂಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ ಇಲ್ಲಿ ಖದೀಮರು.
IIIT ಸಮೀಪದಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಧಾರವಾಡದ ಹೌಸಿಂಗ್ ಬೋರ್ಡ ಜಾಗದಲ್ಲಿ ಅಕ್ರಮವಾಗಿ ಮಣ್ಣು ದರೋಡೆ (ಮರಮ್ ) ಕೆಂಪು ಮಣ್ಣು ತೆಗೆಯಲಾಗುತ್ತಿದೆ.
ಇಲ್ಲಿ ತೆಗೆದ ಮಣ್ಣನ್ನು ವಾಹನ ಒಂದಕ್ಕೆ 3000 ರೂಪಾಯಿಯಿಂದ- 4000 ವರೆಗೆ ಒಂದು ಟಿಪ್ಪರಗೆ ಮಾರಾಟ ಮಾಡಲಾಗುತ್ತೆ.
ದಿನಕ್ಕೆ 50 ರಿಂದ 100 ಟಿಪ್ಪರ ಸಾಗಾಟ ಮಾಡಲಾಗುತ್ತದೆ.
ಇನ್ನೊಂದು ಅಕ್ರಮವಾಗಿ ಇಷ್ಟೆಲ್ಲಾ ಮಾಡ್ತಾ ಇದ್ದರೂ ಮಣ್ಣು ತೆಗೆಯುವ ಜೆಸಿಬಿಗಳಿಗೆ ಯಾವುದೇ ನಂಬರ್ ಪ್ಲೇಟ್ ಇಲ್ಲದೇ ಇರುವುದು ಅಕ್ರಮ ಮಾಡುವವರ ಚಾಲಾಕಿತನವನ್ನು ಎದ್ದು ತೋರಿಸುತ್ತದೆ.