ಸ್ಥಳೀಯ ಸುದ್ದಿ

ಧಾರವಾಡದ ಬೆಡಗಿಗೆ ಮಿಸ್ ಊರ್ವಶಿ 2022 ಕಿರೀಟ

ಧಾರವಾಡ

ಧಾರವಾಡದ ಕೆಸಿಡಿ ಕಾಲೇಜಿನ ವಿದ್ಯಾರ್ಥಿನಿ ರಾಜಸ್ತಾನದ ಜೈಪುರದಲ್ಲಿ ಬ್ಯೂಟಿ ಕಾಂಫೀಟೆಶನಲ್ಲಿ ಕಮಾಲ್ ಮಾಡಿದ್ದು, ಮಿಸ್ ಪ್ಯಾಶನ್ ಐಕಾನ್ ಆಗಿ ಆಯ್ಕೆಯಾಗಿದ್ದಾರೆ.

ಬಾಲಿವುಡನ ಖ್ಯಾತ ತಾರೆ ಜರೀನ ಖಾನ ಅವರಿಂದ ಕಿರೀಟಧಾರಣೆ ಮಾಡಿಸಿಕೊಂಡಿದ್ದಾಳೆ ಈ ಧಾರವಾಡದ ಯುವತಿ.

ಕೆಸಿಡಿ ಕಾಲೇಜಿನ ವರ್ಶಿನಿ ರಾಮಡಗಿ ಬಿಟಿಟಿಎಂ
(ಬ್ಯಾಚುಲರ್ ಆಫ ಟ್ರಾವೆಲ್ ಆ್ಯಂಡ ಟೂರಿಸಂ ಮ್ಯಾನೇಜ್ಮೆಂಟ್ )
ವಿದ್ಯಾರ್ಥಿನಿಯಾಗಿದ್ದು,
18ನೇ ಮಿಸ್ ಊರ್ವಶಿ 22 ವಿನ್ನರ್ ಆಗಿದ್ದಾರೆ.

25 ರಾಜ್ಯಗಳಿಂದ 25 ಸ್ಪರ್ದಾಳು ಭಾಗಿಯಾಗಿದ್ದ ಈ ಸ್ಫರ್ಧೆಯಲ್ಲಿ ಕರ್ನಾಟಕ ದಿಂದ ಸ್ಫರ್ಧಿಸಿ ಆಯ್ಕೆಯಾಗಿದ್ದಾರೆ ವರ್ಷಿಣಿ.

ಎಲೈಟ್ ಪೌಂಡೇಷನ್ ಸಿಇಓ ವಿರೇಂದ್ರ ಅಗರವಾಲ ಮತ್ತು ಮಿಸ್ ಊರ್ವಶಿ 2022 ಡೈರೆಕ್ಟರ್ ರಚನಾ ಚೌದರಿ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮ ಇದು.

ರಾಜಸ್ಥಾನದ ಜೈಪುರ ಪಂಚತಾರಾ ಹೋಟೆಲ್
11/9/22 ರಂದು ನಡೆದ ಕಾರ್ಯಕ್ರಮ ಇದಾಗಿದೆ.

ವರ್ಶಿನಿ ಅವರು ತಂದೆ
ಹೆಚ್.ರಾಮಡಗಿ ಕಾರವಾರದ ಆಕಾಶವಾಣಿಯಲ್ಲಿ ನಿರ್ದೇಶಕರಾಗಿದ್ದು, ತಾಯಿ ಮಂಜುಳಾ ರಾಮಡಗಿ ಸಾಹಿತಿಯಾಗಿದ್ದಾರೆ. ಇನ್ನೊಬ್ಬ ಸಹೋದರ ಸಾಫ್ಟವೇರ್ ಎಂಜಿನೀಯರ್ ಆಗಿದ್ದಾರೆ.

18 ನೇ ಪ್ಯಾಜೆಂಟ್ ಇದಾಗಿದ್ದು, 20 ವರ್ಷದ ವರ್ಷಿಣಿ 5 ಅಡಿ 9 ಇಂಚು ಇದ್ದಾರೆ.

2023 ರಲ್ಲಿ ನಡೆಯುತ್ತಿರುವ ಸ್ಪರ್ಧೆ ಮಿಸ್ ಇಂಟರ ಕಾಂಟಿನೇಟಲ್ ಸ್ಫರ್ಧೆ ಭಾಗವಹಿಸುವುದೇ ವರ್ಷಿಣಿ ಗುರಿಯಾಗಿದೆ.

Related Articles

Leave a Reply

Your email address will not be published. Required fields are marked *