ಸ್ಥಳೀಯ ಸುದ್ದಿ

ಧರ್ಮ ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಲ್ಲಿ ಧರ್ಮ ಗೆಲುವು ಆಗುತ್ತೆ- ಮಾಜಿ ಸಚಿವ ಸಂತೋಷ ಲಾಡ್

ಧಾರವಾಡ
ಧಾರವಾಡ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರು ಹೆಚ್ಚಿನ ಅಭಿವೃಧ್ಧಿ ಮಾಡಿದ್ದಾರೆ. ಕೆಲವೊಂದಿಷ್ಟು ದುಷ್ಟ ಶಕ್ತಿಗಳು ಕುತಂತ್ರದಿಂದ ಕ್ಷೇತ್ರದಿಂದ ದೂರವಿಟ್ಟರೂ ನಿಮ್ಮ ಹೃದಯದಿಂದ ಅವರನ್ನು ದೂರವಿಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.


ಧಾರವಾಡ ತಾಲೂಕಿನ ಅಮ್ಮಿನಭಾವಿ ಹಾಗೂ ಗರಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.


ಈ ಚುನಾವಣೆ ಕೇವಲ ವಿನಯ ಕುಲಕರ್ಣಿಯವರ ಚುನಾವಣೆಯಲ್ಲ. ಇದು ಧರ್ಮ ಅಧರ್ಮದ ನಡುವೆ ನಡೆಯುತ್ತಿರುವ ಯುದ್ಧವಾಗಿದೆ. ಈ ಯುದ್ಧದಲ್ಲಿ ಧರ್ಮಕ್ಕೆ ಜಯವಾಗಲಿದೆ. ವಿನಯ ಕುಲಕರ್ಣಿ ಅವರ ಬೆನ್ನಿಗೆ ಚನ್ನಮ್ಮಳಂತೆ ಹಗಲಿರುಳು ದುಡಿದು ಅವರ ಗೆಲುವಿಗೆ ಶ್ರಮಿಸುತ್ತಿರುವ ಶಿವಲೀಲಾ ಅಕ್ಕನಿಗೆ ತಾವೆಲ್ಲಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕರೆ ನೀಡಿದರು.


ಕಾಂಗ್ರೆಸ್ ಪಕ್ಷ ೧೯೪೭ರಿಂದ ೨೦೧೪ರವರೆಗೆ ದೇಶದಲ್ಲಿ ಆಡಳಿ ನಡೆಸುವ ಮೂಲಕ ಸುಭದ್ರ ಸರಕಾರದ ಮೂಲಕ ಬಡವರಿಗೆ ಸ್ಪಂದಿಸಿತ್ತು. ಆದರೆ ಕಳೆದ ೯ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರ ೧೬೫ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಅಧಿಕಾರಕ್ಕೆ ಬಂದ ನಂತರ ವಿದೇಶದಲ್ಲಿನ ಕಪ್ಪು ಹಣ ತಂದು ೧೫ ಲಕ್ಷ ರೂ. ನೀಡುತ್ತೇನೆ ಎಂದಿದ್ದರು. ಆದರೆ, ಬಿಜೆಪಿಯವರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿನ ಬಡವರಿಗೆ ಉಚಿತ ಅಕ್ಕಿ, ನಿರೂದ್ಯೋಗಿಗಳಿಗೆ ಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಕಾAಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಮಾತನಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಳೆದ ಬಾರಿ ಅಮ್ಮಿನಭಾವಿ ಗ್ರಾಮದಿಂದ ಸಾಕಷ್ಟು ಮತಗಳನ್ನು ಹಾಕಿ ಗ್ರಾಮದ ಜನರು ಅವರ ಗೆಲುವಿಗೆ ಕಾರಣರಾಗಿದ್ದರು. ಆದರೆ, ಆ ಶಾಸಕರು ಗ್ರಾಮದ ಸಮಗ್ರ ಅಭಿವದ್ಧಿಗೆ ಶ್ರಮಿಸಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ನಾಯಕಿ ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡರ, ಇತರರು ಪಾಲ್ಗೊಂಡಿದ್ದರು.
.

Related Articles

Leave a Reply

Your email address will not be published. Required fields are marked *