ಸ್ಥಳೀಯ ಸುದ್ದಿ
ತಿಂಗಳಾದ್ರೂ ಬಂಧನವಾಗಿಲ್ಲ ಗಂಧದಚೋರರು
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಗಂಧದ ಮರಗಳ್ಳತನ ಮಾಡಿದ ಗಂಧದ ಚೋರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಂಗಳ ಮೇಲಾದ್ರೂ ಕಣ್ಣಿಗೆ ಕಾಣದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಗಂಧದ ಚೋರರ ಗ್ಯಾಂಗ್ ಪುಲ್ ಆ್ಯಕ್ಟಿವ್ ಆಗಿ ಸಿನಿಮಾ ಸ್ಟೈಲ್ ನಲ್ಲಿ ಗಂಧದ ಮರಗಳನ್ನು ಕಡಿದುಕೊಂಡು ಪರಾರಿಯಾಗಿತ್ತು.
ಜೋತೆಗೆ ಮಾರಾಕಾಸ್ತ್ರ ಹಿಡಿದು ಬೆದರಿಸಿ ಪರಾರಿಯಾದವರ ಬಗ್ಗೆ ಅರಣ್ಯ ಇಲಾಖೆಯವರೆಗೂ ಇನ್ನುವರೆಗೂ ಮಾಹಿತಿ ಸಿಗದೇ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.
ಕೆಸಿಡಿ ಕಾಲೇಜಿನ ಆವರಣ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೆ ಆವರಣ, ಸಿಇಓ ಮನೆ ಆವರಣಗಳಲ್ಲಿ ಈ ಗ್ಯಾಂಗ್ ಗಂಧದ ಮರ ಕಡಿದು ಪರಾರಿಯಾಗಿತ್ತು.
ಆದ್ರೆ ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ಗಂಧದ ಮರಕಡಿದ ಪ್ರಕರಣದಲ್ಲಿ ಈಗಾಗಲೇ ಒಬ್ಬರ ಬಂಧನವಾಗಿ ಮತ್ತಿಬ್ಬರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
ಆದ್ರೆ ಗಂಧದ ಚೋರರ ಗ್ಯಾಂಗ್ ಬಂಧನ ಮಾಡೋದು ನಮಗೆ ತಲೆನೋವಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ರು.