ಸ್ಥಳೀಯ ಸುದ್ದಿ
ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಚಿರತೆ ಹಾವಳಿ
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಚಿರತೆ ಹಾವಳಿ ಕಾಟ ಹೆಚ್ಚಾಗುತ್ತಲೇ ಹೋಗುತ್ತಿದೆ. ಇತ್ತೀಚಿಗಷ್ಟೇ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಹಾಗೂ ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಜನರ ನೆಮ್ಮದಿ ಹಾಳು ಮಾಡಿದ್ದ ಚಿರತೆ ಹಾವಳಿ ನೆನಪು ಮರೆಯುವ ಮುನ್ನವೇ ಮತ್ತೊಂದು ರೀತಿಯಲ್ಲಿ ಚಿರತೆ ಹಾವಳಿ ಜಿಲ್ಲೆಯ ಜನರಿಗೆ ಆತಂಕ ಉಂಟು ಮಾಡಿದೆ.
ಕಲಘಟಗಿ ತಾಲೂಕಿನಲ್ಲಿ ಹೊಲ್ತಿಕೋಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆಯೊಂದು ರೈತನ ಆಡಿನ ಮರಿಗಳನ್ನು ತಿಂದು ಹಾಕಿದೆ.
ರಾಗಿ ಕಲ್ಲಾಪೂರದ ಗ್ರಾಮದ ರೈತ ರಾಯಪ್ಪಾ ಕೊಚ್ಚರಗಿ ಅವರ ೨ ಆಡಿನ ಮರಿಗಳನ್ನು ಚಿರತೆ ತಿಂದು ಹಾಕಿದ್ದು, ಆಡಿನ ಮರಿಗಳಿಂದಲೇ ಜೀವನ ನಡೆಸಿಕೊಂಡಿದ್ದ ರಾಯಪ್ಪನ ಕುಟುಂಬ ಇದೀಗ ಬೀದಿಗೆ ಬಿದ್ದಿದೆ.
ಕಾಡು ಪ್ರಾಣಿ ಹಾವಳಿಗೆ ಆಗಿರುವ ಹಾನಿಯನ್ನು ಭರಿಸಿಕೊಡಿ ಎಂದು ರಾಯಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು, ಪರಿಹಾರ ಕೊಡುವಂತೆ ಮನವಿಯನ್ನು ಸಹ ಸಲ್ಲಿಸಿದ್ದಾರೆ.