ಚಿಲ್ಲರೆ ಇಲ್ದಿದ್ರೆ ಬಸ್ ಹತ್ತ ಬೇಡಿ:ಚಾಲಕ ಕಂ ನಿರ್ವಾಹಕ ರಮೇಶ್!
ಗದಗ- ಹುಬ್ಬಳ್ಳಿ ಯ ತಡೆರಹಿತ ಬಸ್ ಚಾಲಕ ಪ್ರಯಾಣಿಕರೊಂದಿಗೆ ಚಿಲ್ಲರೆ ಹಿಂತುರಿಗಿ ನೀಡುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿ ಚಿಲ್ಲರೆ ಕೊಡದೆಯೆ ಹೊರಟು ಹೋಗಿರುವ ಘಟನೆ ಇಂದು ಬೆಳಿಗ್ಗೆ 8:20ರ ವೇಳೆಗೆ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗದಗ ಮತ್ತು ಹುಬ್ಬಳ್ಳಿಯ ನಡುವೆ ಸಂಚರಿಸುವ ತಡೆ ರಹಿತ ಬಸ್ ಚಾಲಕ ರಮೇಶ FC.ಸಂಖ್ಯೆ 14931 ಸಂಚಾರ ಸಂಖ್ಯೆ.54 ರ ಬಸ್ ಸಂಖ್ಯೆ ಕೆ ಎ 26 ಎಪ್ 1025 ಎಂಬ ಚಾಲಕ ಕಂ ನಿರ್ವಾಹಕ ಎಂದು ಗುರುತಿಸಿದ್ದು.
ಇಂದು ಗದಗನಿಂದ ಬಂದ ಪ್ರಯಾಣಿಕ ವಿಧ್ಯಾರ್ಥಿಗಳಿಗೆ 70ರೂ.ದರದ ಟಿಕೇಟ್ ನೀಡಿದ್ದಾರೆ. ಸಂಧರ್ಭಕ್ಕನುಸಾರವಾಗಿ 500,100,ರ ಮುಖ ಬೆಲೆಯ ಹಣ ನಿಡಿದ್ದ ಪ್ರಯಾಣಿಕರಿಗೆ ಬಸ್ ನಿಂದ ಇಳಿಯುವಾಗ ಚಿಲ್ಲರೆ ಪಡೆದು ಕೊಳ್ಳಿ ಎಂದು ಸೂಚಿಸಿದ್ದಾನೆ.
ಅದರಂತೆ ಗದಗನಿಂದ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದ ಬಳಿ ಬಂದು ಬಸ್ ನಿಂದ ಇಳಿದು ಚಿಲ್ಲರೆ ಉಳಿಸಿಕೊಂಡ ಚಾಲಕನ ಬಳಿ ಚಿಲ್ಲರೆ ಕೆಳಿದ್ದೆ ತಡ ಚಿಲ್ಲರೆ ಇಲ್ಲ ಮುಂದಿನ ನಿಲ್ದಾಣಕ್ಕೆ ಬನ್ನಿ ಎಂದ ಚಾಲಕನ ಮಾತಿಗೆ ನಾವು ಅಲ್ಲಿವರೆಗೂ ಬಂದ್ರೆ ಪುನಃ ಇದೆ ನಿಲ್ದಾಣಕ್ಕೆ ಬರಲು ತೊಂದರೆಯಾಗುತ್ತದೆ ಎಂದು ವಿನಂತಿಸಿದರು.ಸಹಕರಿಸದ ಚಾಲಕ ಚಿಲ್ಲರೆ ಇಲ್ದಿದ್ರೆ ಬಸ್ ಯಾಕೆ ಹತ್ತ ಬೇಕು ಎಂದು ಗದರಿಸಿದ್ದಾನೆ. ತಾವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಕ್ಕೆ. ನೀವು ನನ್ನ ಮೇಲೆ ಕಂಪ್ಲೇಟ್ ಕೊಡೊಗ್ರೀ… ಇವೆಲ್ಲಾ ದಿನಾ ನೊಡ್ತೇನಿ ಎನ್ನುತ್ತ. ಚಿಲ್ಲರೆಯನ್ನು ಸಹ ಕೊಡದೆ ಪ್ರಯಾಣಿಕರನ್ನ ಇಳಿಸಿ ಬಸ್ ಹೊಸೂರಿನ ಬಸ್ ನಿಲ್ದಾಣಕ್ಕೆ ಒಯ್ದಿದ್ದಾನೆ.
ಇ ಬಗ್ಗೆ ವಿಷಯವನ್ನು ಗದಗ ಡೀಪೋದ ಹಿರಿಯ ಅಧಿಕಾರಿಗಳು ಬಸ್ ಚಾಲಕ ರಮೇಶನ ಸಾರ್ವಜನಿಕ ವಲಯದಲ್ಲಿ ಅನುಚಿತಾಗಿ ವರ್ತಿಸದಿರಲು ಮತ್ತು ಪ್ರಯಾಣಿಕರಿಗೆ ಚಿಲ್ಲರೆ ಕೊಡುವ ನೆಪದಲ್ಲಿ ಕಿರಿ ಕಿರಿ ಉಂಟು ಮಾಡುವುದರ ಬಗ್ಗೆ ಕ್ರಮ ತೆಗೆದುಕೊಂಡರೆ ಅದು ಕರ್ನಾಟಕ ವಾಯುವ್ಯ ಸಾರಿಗೆಯ ಗೌರವ ಕಾಪಾಡಿ ದಂತಾಗುತ್ತದೆ