ಧಾರವಾಡರಾಜ್ಯಸ್ಥಳೀಯ ಸುದ್ದಿ
ಗ್ರಾಮಪಂಚಾಯ್ತಿ ಉಪಾಧ್ಯಕ್ಷನ ಬರ್ಬರ ಕೊಲೆ:ನಾಲ್ವರ ಬಂಧನ!
ಧಾರವಾಡ* : ಎರಡು ಗುಂಪಿನ ನಡುವಿನ ಜಗಳವನ್ನ ಬಿಡಿಸಿ ಕಳುಹಿಸಿದ ವ್ಯಕ್ತಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಕಮ್ಮಾರ(36) ಮೃತ ವ್ಯಕ್ತಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆಗಿರುವ ಪ್ರವೀಣ್, ಗ್ರಾಮದಲ್ಲಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಯ ಪ್ರಸಾದದ ವೇಳೆ ಕೆಲವರು ಕುಡಿದು ಜಗಳವಾಡಿಕೊಳ್ಳಲು ಶುರು ಮಾಡಿದ್ದಾರೆ.
ಈ ವೇಳೆ ಪ್ರವೀಣ್ ಜಗಳ ಬಿಡಿಸಿ ಕಳುಹಿಸಿದ್ದ.
ಆದರೆ ಜಗಳ ಮಾಡಿದ್ದ ಒಂದು ಗುಂಪಿನ ಕಡೆಯವರು ಪುನಃ ಜಗಳವಾಡಲು ಬಂದಿದ್ದಾರೆ. ಈ ವೇಳೆ ಪ್ರವೀಣ್ಗೆ ಚಾಕು ಇರಿದಿದ್ದಾರೆ. ಇನ್ನು ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಇಂದು(ಏ.19) ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ಪ್ರವೀಣ್ ಸಾವನ್ನಪ್ಪಿದ್ದಾನೆ. ಚಾಕು ಇರಿದಿದ್ದ ರಾಘವೇಂದ್ರ ಪಟಾತ್ ಸೇರಿದಂತೆ ನಾಲ್ಕು ಜನರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.