ಸ್ಥಳೀಯ ಸುದ್ದಿ
ಕೌಟುಂಬಿಕ ಕಲಹ ಅಪ್ರಾಪ್ತ ಮಗನಿಂದಲೇ ತಂದೆ ಹತ್ಯೆ
ಧಾರವಾಡ
ಅತಿಯಾದ ಕುಡಿತಕ್ಕೆ ಒಳಗಾಗಿದ್ದ ಮನೆಯ ಯಜಮಾನ ಕೌಟುಂಬಿಕ ಕಲಹದ ಘಟನೆಯಲ್ಲಿ ಹೆತ್ತ ಮಗನಿಂದಲೇ ಹತ್ಯೆಯಾಗಿದ್ದಾನೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಪುಂಡಲೀಕ ಒಂಟಿಗಡದ ಎನ್ನುವ ವ್ಯಕ್ತಿ ಕೊಲೆಯಾಗಿ ಹೋಗಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ಪುಂಡಲೀಕ ಹೆಂಡತಿ- ಮಗ ಹಾಗೂ ತಾಯಿಗೆ ಕೊಡಲಿ ಹಿಡಿದು ಹೊಡೆಯಲು ಹೋಗಿದ್ದ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅಪ್ರಾಪ್ತ ಮಗ ಅದೇ ಕೊಡಲಿಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ್ದಾನೆ.
ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ತಂದೆಯ ಕೊಲೆ ಮಾಡಿದ ಅಪ್ರಾಪ್ತ ಹುಡುಗನ ಮೇಲೆ ಪ್ರಕರಣ ದಾಖಲಾಗಿದೆ.