ಕೃಷಿ ಕಾಯ್ದೆ ವಾಪಸ್-ರೈತರಿಗೆ ಸಿಕ್ಕ ಜಯ
ಧಾರವಾಡ
ವಿದ್ಯಾರ್ಥಿ ಸಂಘಟನೆ ಕೃಷಿ ಮಹಾವಿದ್ಯಾಲಯ ಧಾರವಾಡ ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಕೃಷಿ ಮಹಾವಿದ್ಯಾಲಯ ಧಾರವಾಡ ದಲ್ಲಿ ಕೃಷಿ ಕಾಯ್ದೆಗಳು ಮತ್ತು ಪರಿಣಾಮದ ಕುರಿತಾಗಿ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿತ್ತು.
ಈ ಚರ್ಚಾಗೋಷ್ಠಿ ಗೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆರ್ ಕೆ ಎಸ್ ಎಐಕೆಕೆಎಂಎಸ್ ನ ರಾಜ್ಯ ಕಾರ್ಯದರ್ಶಿ ಹೆಚ್ ವಿ ದಿವಾಕರ್ ಮಾತನಾಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ,ಅಲ್ಲಿವರೆಗೂ ಕೂಡ ರೈತರ ಹೋರಾಟ ಮುಂದುವರೆಯಲಿದೆ,ಕೃಷಿ ಕಾಯ್ದೆಗಳು ರೈತರಿಗೆ ಅಷ್ಟೇ ಅಲ್ಲದೆ ದೇಶದ ಜನತೆಗೆ ಮಾರಕವಾಗಿವೆ ಈ ಕಾಯ್ದೆಗಳು ಸಂಪೂರ್ಣ ರದ್ದಾಗುವ ವರೆಗೂ ಹೋರಾಟ ಮುಂದುವರೆಯಲಿದೆ ಎಂದು. ಹೇಳಿದರು.
ಮಹಾವಿದ್ಯಾಲಯದ ಡೀನ್ ಡಾ. ಬಿ ಡಿ ಬಿರಾದರ್,ಆರ್ ಕೆ ಎಸ್ ರಾಜ್ಯಖಜಾಂಚಿ ವಿ ನಾಗಮ್ಮಳ್ ,ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ್ ಜಡಗಣ್ಣನವರ,ಕೃಷಿ ಮಹಾವಿದ್ಯಾಲಯದ ಉಪನ್ಯಾಸಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.