ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಕಿಡಿ-ಗೆಡಿಗಳಿಂದ ಬೆಂಕಿ : ಸ್ಥಳಕ್ಕೆ ಅಗ್ನಿಶಾಮಕ ದಳ!
ಹುಬ್ಬಳ್ಳಿ: ಕಿಮ್ಸ್ ಆವರಣದಲ್ಲಿರುವ ಕಸದ ರಾಸಿಗೆ ಯಾರೊ ಕಿಡಿಗೆಡಿ ಗಳು ಬೆಂಕಿ ಹಚ್ಚಿದ ಪರಿಣಾಮ ವಾಗಿ ಕೆಲಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಕಿಮ್ಸ್ ಆಸ್ಪತ್ರೆಯ ಶವಾಗಾರದ ಹಿಂಬದಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಕಸ,ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿತ್ತು ಎನ್ನಲಾಗಿದ್ದು. ಇಂದು ಯಾರೋ ಯುವಕರು ಸೆರಿಕೊಂಡು ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಕಿಯ ಕೆನ್ನಾಲಿಗೆಗಳು ತಿವ್ರವಾಗಿ ಹಬ್ಬುತ್ತಿರುವುದನ್ನ ಕಂಡ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದರಿಂದ. ಬೆಂಕಿಯಿಂದ ಆಗಬಹುದಾದ ಸಮಸ್ಯೆ ತಡೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.