ಸ್ಥಳೀಯ ಸುದ್ದಿ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಪ್ರಕಟ
ಬೆಂಗಳೂರು
ರಾಜ್ಯದಲ್ಲಿ ಪತ್ರಿಕಾ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಪತ್ರಕರ್ತರಿಗೆ ಹಾಗೂ ಹಿರಿಯ ಪತ್ರಕರ್ತರಿಗೆ ಸೇರಿದಂತೆ ಮಾಧ್ಯಮದ ಸಂಪಾದಕರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.
ಈ ಬಾರಿಯ ವಿಶೇಷ ಪ್ರಶಸ್ತಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ ಅವರಿಗೆ ಸಿಕ್ಕಿದೆ.
ಉಳಿದಂತೆ ವಾಹಿನಿಯ ಹಾಗೂ ಪತ್ರಿಕೆ ರಂಗದ ಹಿರಿಯ ಅನುಭವಿ ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಸಿಕ್ಕಿದೆ.
ಒಟ್ಟು 4 ವರ್ಷದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಲಾಗಿದೆ.
2021ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇತ್ತೀಚಿಗೆ ತನಿಖಾ ವರದಿಗಾರಿಕೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯಪುರದಲ್ಲಿ ಪ್ರಶಸ್ತಿ ಪಡೆದಿರುವ ಕನ್ನಡದ ಪ್ರಭದ ಯಾದಗಿರಿ ಜಿಲ್ಲೆಯ ಹಿರಿಯ ವರದಿಗಾರ ಆನಂದ ಸೌದಿ ಅವರು ಇದ್ದಾರೆ.