ಒಳ್ಳೆಯ ವ್ಯಕ್ತಿಗಳನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು : ಡಾ. ಆನಂದ ಪಾಂಡುರಂಗಿ
ಧಾರವಾಡ : ವಿದ್ಯಾರ್ಥಿಗಳು ಒಳ್ಳೆಯ ಆದರ್ಶಗಳನ್ನು ಅನುಸರಿಸಬೇಕು ಹಾಗೂ ಒಳ್ಳೆಯ ವ್ಯಕ್ತಿಗಳನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಡಾ. ಆನಂದ ಪಾಂಡುರಂಗಿ ಹೇಳಿದರು.
ಧಾರವಾಡ ಸಿಎಸ್ಐ ಕಾಲೇಜು ಸಭಾಂಗಣದಲ್ಲಿ ಯಂಗ್ ಪ್ಲೇಮ್ಸ್ ಯುಥ್ ಅಶೋಶಿಯೇಶನ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಮಾಧಕ ವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಹಲವಾರು ಏರು ಪೇರು ಸಹಜ ಅದರಲ್ಲೂ ಮಾನಸಿಕ ಆರೋಗ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಪೋಲಿಸ್ ಆಯುಕ್ತರಾರ ಅನುಷಾ ಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಪ್ಪು ಚುಕ್ಕೆ ಬಾರದಂತೆ ತಡೆಯಲು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಕಮಲಾ ದಾವಲೆ, ರೋಶನ್ ಆಬ್ರೋಜ್, ವಿಕಾಶ ಚತ್ರೀಯ, ಸಿ.ಎಚ್, ಪಾಟೀಲ್, ನ್ಯೂಸ್ ಟೈಂ ಮಾಲೀಕರಾದ ಗಿರೀಶ್ ಹೆಗಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.